ಜಮ್ಮು: ಬಿಗಿ ಭದ್ರತೆಯ ನಡುವೆ ಬುಧವಾರ ಬೆಳಿಗ್ಗೆ ಅಮರನಾಥ ಯಾತ್ರಿಕರ ಮೊದಲ ತಂಡ ಜಮ್ಮುವಿನ ಬೇಸ್ ಕ್ಯಾಂಪ್ನಿಂದ ಯಾತ್ರೆ ಆರಂಭಿಸಿದೆ.
ಜಮ್ಮು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಬಿವಿಆರ್ ಸುಬ್ರಹ್ಮಣ್ಯಮ್ ಸ್ವಾಮಿ, ಅಲ್ಲಿನ ರಾಜ್ಯಪಾಲರ ಸಲಹೆಗಾರರಾದ ಬಿಬಿ ವ್ಯಾಸ್, ವಿಜಯ್ ಕುಮಾರ್ ಅವರು ಮೊದಲ ಬ್ಯಾಚ್ನ ಅಮರನಾಥ ಯಾತ್ರೆಗೆ ಚಾಲನೆ ನೀಡಿದರು.
60 ದಿನಗಳ ಕಾಲ ಯಾತ್ರೆ ನಡೆಯಲಿದ್ದು, ಉಗ್ರರ ಭೀತಿಯಿದ್ದರೂ ಲೆಕ್ಕಿಸದೆ ನೂರಾರು ಸಂಖ್ಯೆಯ ಜನರು ಅಮರನಾಥನ ದರ್ಶನ ಪಡೆಯಲು ಮುಂದಾಗಿದ್ದಾರೆ.
ಸಾರ್ವಜನಿಕರು, ಭದ್ರತಾ ಪಡೆಗಳು, ಅಭಿವೃದ್ಧಿ ಮಂಡಳಿಗಳ ಸಹಕಾರದೊಂದಿಗೆ ಅಮರನಾಥ ಯಾತ್ರೆ ಸುಸೂತ್ರವಾಗಿ ನಡೆಯಲಿದೆ ಎಂದು ರಾಜ್ಯಪಾಲರ ಸಲಹೆಗಾರ ವಿಜಯ್ ಕುಮಾರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.