ಹಾಸನ: ಹಿಂದಿನ ಸರ್ಕಾರದ ಅಧಿಕಾರ ದುರುಪಯೋಗದ ಪರಿಣಾಮವಾಗಿ ಹಾಸನದಿಂದ ವರ್ಗಾವಣೆಗೊಂಡಿದ್ದ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಮತ್ತೆ ಹಾಸನಕ್ಕೆ ಬಂದಿದ್ದಾರೆ. ಹಾಸನದ ಜಿಲ್ಲಾಧಿಕಾರಿಯಾಗಿಯೇ ಅವರು ಮುಂದುವರೆಯಬೇಕು ಎಂದು ಹೈಕೋರ್ಟ್ ಆದೇಶಿಸಿತ್ತು.
ಅಕ್ರಮ ಮರಳು ದಂಧೆ, ಬೇಜವಾಬ್ದಾರಿ ರಾಜಕಾರಣಿಗಳಿಗೆ ಸಿಂಹ ಸ್ವಪ್ನವಾಗಿದ್ದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಹಿಂದಿನ ಸರ್ಕಾರದ ಪ್ರಭಾವಿಗಳ ಕುತಂತ್ರದಿಂದ ವಿಧಾನಸಭಾ ಚುನಾವಣೆಯ ಸಂದರ್ಭ ವರ್ಗಾವಣೆಗೊಂಡಿದ್ದರು. ಆದರೆ ಅವಧಿಗೆ ಮೊದಲೇ ತಮ್ಮನ್ನು ವರ್ಗಾವಣೆ ಮಾಡಿದ್ದರ ವಿರುದ್ಧ ಅವರು ಕಾನೂನು ಸಮರ ಸಾರಿದ್ದರು.
ಹಾಸನಕ್ಕೆ ಜಿಲ್ಲಾಧಿಕಾರಿಯಾಗಿ ಬಂದ ಕೂಡಲೇ ಅವರು, ಅಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಿದ್ದರು. ಇದು ಅಲ್ಲಿನ ಕಾಂಗ್ರೆಸ್ ಸಚಿವ ಎ.ಮಂಜು ಸೇರಿದಂತೆ ಹಲವರ ಕೆಂಗಣ್ಣಿಗೆ ಕಾರಣವಾಗಿತ್ತು. ಸರ್ಕಾರದ ಮೇಲೆ ಅವರು ಒತ್ತಡ ತಂದು ರೋಹಿಣಿಯವರನ್ನು ಎತ್ತಂಗಡಿ ಮಾಡಿಸಿದ್ದರು. ಆದರೆ ಸಮ್ಮನೆ ಕೂರದ ರೋಹಿಣಿ, ಸರ್ಕಾರದ ವಿರುದ್ಧ ಕಾನೂನು ಸಮರ ನಡೆಸಿ ವಿಜಯಿಯಾಗಿದ್ದಾರೆ. ಬೆದರಿಕೆಗಳು, ಅಧಿಕಾರದ ದರ್ಪಕ್ಕೆ ಕಾನೂನಿನ ಮೂಲಕ ಉತ್ತರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.