ಭುವನೇಶ್ವರ: ವರದಕ್ಷಿಣೆ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದ ಮಾವನ ಬಳಿಯಿಂದ 1000 ಗಿಡಗಳನ್ನು ವರದಕ್ಷಿಣೆಯಾಗಿ ಪಡೆದು ಮಾದರಿ ಎನಿಸಿದ್ದಾರೆ ಒರಿಸ್ಸಾದ ಶಾಲಾ ಶಿಕ್ಷಕ ಸರೋಜ್ಕಾಂತ್ ಬಿಸ್ವಾಲ್.
ಬಿಸ್ವಾಲ್ ಅವರು ಚೌದಕುಲತ ಗ್ರಾಮದ ಜಗ್ನನಾಥ್ ವಿದ್ಯಾಪೀಠದಲ್ಲಿ ವಿಜ್ಞಾನ ಕಲಿಸುತ್ತಿದ್ದಾರೆ. ಇವರಿಗೆ ಮದುವೆ ನಿಶ್ಚಯವಾಗಿದ್ದು, ವರದಕ್ಷಿಣೆ ಪಡೆಯಬಾರದು ಎಂದು ಶಪಥ ಮಾಡಿದ್ದರು. ಆದರೆ ಮಾವ ವರದಕ್ಷಿಣೆಯನ್ನು ತೆಗೆದುಕೊಳ್ಳಲೇ ಬೇಕೆಂದು ಒತ್ತಾಯಿಸಿದ್ದಾರೆ. ಕೊನೆಗೂ ಸ್ವೀಕರಿಸಲು ಇವರು ಒಪ್ಪಿಕೊಂಡರು. ಆದರೆ ವರದಕ್ಷಿಣೆ ರೂಪದಲ್ಲಿ ಗಿಡಗಳನ್ನು ಮಾತ್ರ ನೀಡಬೇಕೆಂದು ಕಂಡೀಷನ್ ಹಾಕಿದ್ದಾರೆ. ಅದರಂತೆ ಮಾವ ಇವರಿಗೆ 1001 ಗಿಡಗಳನ್ನು ವರದಕ್ಷಿಣೆಯಾಗಿ ನೀಡಿದ್ದಾರೆ.
ಈ ಗಿಡಗಳನ್ನು ಮದುವೆಯ ಮರುದಿನ ಮೆರವಣಿಗೆಯ ಮೂಲಕ ಜಗ್ನನಾಥ್ ತಮ್ಮ ಮನೆಗೆ ಕೊಂಡೊಯ್ದಿದ್ದಾರೆ. ಬಳಿಕ ಇವುಗಳನ್ನು ಶಂಖನಾದ ಊದಿ ತಮ್ಮ ಗ್ರಾಮಸ್ಥರಿಗೆ ಹಂಚಿದ್ದಾರೆ.
ಅಷ್ಟೇ ಅಲ್ಲದೇ ಮದುವೆಯನ್ನು ಶಬ್ದ ಮಾಲಿನ್ಯ ಮುಕ್ತಗೊಳಿಸಿದ್ದು, ಯಾವುದೇ ಪಟಾಕಿ, ವಾದ್ಯಗಳನ್ನು ಬಳಸಲಾಗಿಲ್ಲ. ಮಾದರಿ ಎನಿಸುವ ರೀತಿಯಲ್ಲಿ ವಿವಾಹವಾದ ಶಿಕ್ಷಕನಿಗೆ ಶ್ಲಾಘನೆಗಳ ಮಹಾಪೂರವೇ ಹರಿದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.