ಭೋಪಾಲ್: ಆಕೆ ಚಹಾ ಮಾರಾಟಗಾರನ ಮಗಳು. ಆದರೆ ತಂದೆಯ ಕಡಿಮೆ ಆದಾಯದ ವೃತ್ತಿ ಆಗಸದಲ್ಲಿ ಹಾರುವ ಆಕೆಯ ಕನಸನ್ನು ತಡೆಯಲಿಲ್ಲ. ಕಠಿಣ ಪರಿಶ್ರಮ, ಕನಸಿನ ದಾರಿಯಲ್ಲೇ ಸಾಗುವ ಅಚಲ ನಿರ್ಧಾರ ಇಂದು ಮಧ್ಯಪ್ರದೇಶದ 24 ವರ್ಷದ ಆಂಚಲ್ ಗಂಗ್ವಾಲ್ನ್ನು ಭಾರತೀಯ ವಾಯುಪಡೆಯ ಫೈಟರ್ ಪೈಲೆಟ್ ಆಗುವಂತೆ ಮಾಡಿದೆ.
ಉತ್ತರಾಖಂಡನಲ್ಲಿ ನೆರೆ ಬಂದಿದ್ದ ಸಂದರ್ಭ, ಸಂತ್ರಸ್ಥರನ್ನು ರಕ್ಷಣೆ ಮಾಡಿದ್ದ ಯೋಧರ ಕಾರ್ಯ ಆಕೆಯನ್ನು ಸೇನೆ ಸೇರುವಂತೆ ಪ್ರೇರೇಪಿಸಿತು. ಕುಟುಂಬದ ಸ್ಥಿತಿಗತಿ ಚೆನ್ನಾಗಿಲ್ಲವಾದರೂ ಯುದ್ಧ ವಿಮಾನ ಹಾರಿಸಬೇಕು ಎಂಬ ಛಲ ತೊಟ್ಟ ಆಕೆ ಇಂದು ತನ್ನ ಛಲವನ್ನು ಯಶಸ್ಸಾಗಿ ಪರಿವರ್ತಿಸಿಕೊಂಡಿದ್ದಾಳೆ.
ಏರ್ಫೋರ್ಸ್ ಕಾಮನ್ ಎಂಟರೆನ್ಸ್ ಟೆಸ್ಟ್ ಬರೆದು ಭಾರತೀಯ ವಾಯು ಸೇನೆಯನ್ನು ಸೇರಿ ಫೈಟರ್ ಪೈಲೆಟ್ ತರಬೇತಿಯನ್ನು ಪಡೆಯುತ್ತಿದ್ದಾಳೆ. ಅಷ್ಟೇ ಅಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಬರೆದಿದ್ದಾಳೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ.
ಪ್ರಸ್ತುತ ಈಕೆ ಮಧ್ಯಪ್ರದೇಶದ ಏಕೈಕ ಮಹಿಳಾ ಫೈಟರ್ ಪೈಲೆಟ್ ಆಗಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.