ಜಮ್ಮು: ಮುಂದಿನ ವಾರದಿಂದ ಜಮ್ಮು ಕಾಶ್ಮೀರದಲ್ಲಿ ಅಮರನಾಥ ಯಾತ್ರೆ ಆರಂಭಗೊಳ್ಳಲಿದ್ದು, ನೂರಾರು ಸಂಖ್ಯೆಯ ಭಕ್ತರು ಹಿಮದಿಂದ ರೂಪಿತವಾಗುವ ಶಿವಲಿಂಗದ ದರ್ಶನವನ್ನು ಪಡೆಯಲಿದ್ದಾರೆ. ಭಕ್ತಿಯ ಈ ಪಯಣಕ್ಕೂ ಉಗ್ರರ ಕರಿನೆರಳು ಬಿದ್ದಿದ್ದು, ಭಾರೀ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಿದೆ.
ಅಮರನಾಥ ಯಾತ್ರೆಗೆ ಭಕ್ತರನ್ನು ಕೊಂಡೊಯ್ಯುವ ಪ್ರತಿ ವಾಹನಕ್ಕೂ ಟ್ರ್ಯಾಕಿಂಗ್ ಚಿಪ್ಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ವಾಹನದ ಪ್ರತಿ ಚಲನವಲನಗಳನ್ನು ಗ್ರಹಿಸಲು ಸಾಧ್ಯವಾಗಲಿದೆ. ದಾಳಿಗಳಂತಹ ಘಟನೆ ಸಂಭವಿಸಿದಾಗ ಭದ್ರತಾ ಪಡೆಗಳಿಗೆ ತಕ್ಷಣ ಆಗಮಿಸಲು ನರೆವಾಗಲಿದೆ. ಇದೇ ಮೊದಲ ಬಾರಿಗೆ ಇಂತಹ ತಂತ್ರಜ್ಞಾನಗಳನ್ನು ಬಳಕೆ ಮಾಡಲಾಗುತ್ತಿದೆ. ಲಖನ್ಪುರದಲ್ಲಿ ಸ್ಪೆಷಲ್ ಕೌಂಟರ್ಗಳನ್ನು ನಿರ್ಮಾಣ ಮಾಡಲಾಗಿದೆ.
ಸುಮಾರು 3,880 ಮೀಟರ್ ಎತ್ತರದಲ್ಲಿರುವ ಅಮರನಾಥಗೆ ಜೂನ್ 28ರಿಂದ ಯಾತ್ರೆ ಆರಂಭಗೊಳ್ಳಲಿದೆ, 60 ದಿನಗಳ ಕಾಲ ಮುಂದುವರೆಯಲಿದೆ. ಮೊದಲ ಬ್ಯಾಚ್ ಭಗ್ವತಿ ನಗರ್ ಬೇಸ್ ಕ್ಯಾಂಪ್ನಿಂದ ಹೊರಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.