ನವದೆಹಲಿ: ನಮ್ಮ ಸೈನಿಕರು ಗಡಿಯಲ್ಲಿ ನಿರಂತರವಾಗಿ ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇವರಿಗೆ ನೈತಿಕ ಬೆಂಬಲ ನೀಡಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಆದರೆ ಕಾಂಗ್ರೆಸ್ಸಿಗರು ಮಾತ್ರ ಸರ್ಕಾರವನ್ನು ವಿರೋಧಿಸುವ ಭರದಲ್ಲಿ ನಮ್ಮ ಸೈನಿಕರ ಆತ್ಮಸ್ಥೈರ್ಯವನ್ನು ಕುಂದಿಸುವ ಕಾರ್ಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಅವರ ಹೇಳಿಕೆಗಳು ಸ್ವತಃ ಉಗ್ರರೇ ಬೆಂಬಲಿಸುವ ಮಟ್ಟದಲ್ಲಿ ಇದೆ ಎಂಬುದು ಈ ದೇಶದ ದುರಂತ.
ಇತ್ತೀಚಿಗೆ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು, ಜಮ್ಮು ಕಾಶ್ಮೀರದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರಿಗಿಂತ ಹೆಚ್ಚಾಗಿ ಅಮಾಯಕ ಜನರೇ ಸಾಯುತ್ತಿದ್ದಾರೆ ಎಂದಿದ್ದರು. ಅವರ ಈ ಹೇಳಿಕೆಯನ್ನು ಭಯೋತ್ಪಾದನಾ ಸಂಘಟನೆ ಲಷ್ಕರ್ ಇ ತೋಯ್ಬಾ ಬೆಂಬಲಿಸಿದೆ.
ಲಷ್ಕರ್ ವಕ್ತಾರ ಅಬ್ದುಲ್ಲಾ ಗಝ್ನವಿ ಎಂಬಾತ ಆಜಾದ್ ಅವರ ಮಾತನ್ನು ನಮ್ಮ ಮುಖ್ಯಸ್ಥ ಮೆಹಮೂದ್ ಶಾ ಬೆಂಬಲಿಸಿದ್ದಾರೆ. ನಮಗೂ ಅಂತಹುದೇ ಅಭಿಪ್ರಾಯವಿದೆ ಎಂದಿದ್ದಾನೆ.
ಕಾಂಗ್ರೆಸ್ನ ಹೇಳಿಕೆ ಮತ್ತು ಅದನ್ನು ಬೆಂಬಲಿಸಿದ ಲಷ್ಕರ್ಗೆ ತಿರುಗೇಟು ನೀಡಿರುವ ಬಿಜೆಪಿಯ ರವಿಶಂಕರ್ ಪ್ರಸಾದ್, ಯುಪಿಎ ಅಧಿಕಾರವಧಿ ಮತ್ತು ಬಿಜೆಪಿ ಅವಧಿಯಲ್ಲಿ ಮೃತಪಟ್ಟ ಉಗ್ರರ ಅಂಕಿಅಂಶಗಳನ್ನು ಮುಂದಿಟ್ಟು, ನೋಡಿ ನಿಮ್ಮ ಸರ್ಕಾರ ಮತ್ತು ನಮ್ಮ ಸರ್ಕಾರಕ್ಕೆ ಎಷ್ಟು ವ್ಯತ್ಯಾಸವಿದೆ ಎಂದು, ಕಾಂಗ್ರೆಸ್ ಹೇಳಿದ್ದನ್ನು ಲಷ್ಕರ್ ಬೆಂಬಲಿಸುತ್ತಿದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.