ಭಾರತದ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಮಗ ಸುನೀಲ್ ಶಾಸ್ತ್ರೀ, ‘ಮೋದಿಯವರನ್ನು ಕಂಡರೆ ನನ್ನ ತಂದೆಯನ್ನು ಕಂಡಂತಾಗುತ್ತದೆ’ ಎಂದು ಹೇಳಿದ್ದಾರೆ. ಕಾಂಗ್ರೆಸ್ ಹಾಗೂ ಬಲಪಂಥೀಯ ಆರ್ಎಸ್ಎಸ್/ ಜನಸಂಘ ಇವೆರಡು ಬಣಗಳಿಂದ ಪ್ರಶಂಸೆ ಗಿಟ್ಟಿಸಿಕೊಂಡ ಕಾಂಗ್ರೆಸ್ನ ಕೆಲವೇ ಕೆಲವು ನಾಯಕರಲ್ಲಿ ಶಾಸ್ತ್ರೀಯವರು ಕೂಡ ಪ್ರಮುಖರು.
1965ರಲ್ಲಿ ಜನಸಂಘದ ಸಂಸ್ಥಾಪಕ ಪಿ.ಟಿ. ದೀನ್ ದಯಾಳ್ ಉಪಾಧ್ಯಾಯರು ಶಾಸ್ತ್ರೀಜಿಯವರ ನಾಯಕತ್ವದ ಜವಾಬ್ದಾರಿಯನ್ನು ಕಂಡು ಅವರನ್ನು ‘ಜನ ನಾಯಕ’ ಎಂದು ಬಣ್ಣಿಸಿದ್ದರು. ಅದೇ ರೀತಿಯಲ್ಲಿ ಇದೀಗ ಶಾಸ್ತ್ರೀಯವರ ಮಗ ಸುನೀಲ ಶಾಸ್ತ್ರೀಯವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ. ಆಗ್ರಾದಲ್ಲಿ ಸುನೀಲರನ್ನು ಭೇಟಿಯಾಗಿ, ಅಭಿನಂದಿಸಲು ಬಂದಿದ್ದ ಕಾಂಗ್ರೆಸ್ ನಾಯಕರುಗಳಿಗೆ ಈ ಹೇಳಿಕೆಯಿಂದ ದಿಗ್ಬ್ರಮೆ ಉಂಟಾಗಿದೆ.
‘ತಾಶ್ಕೆಂಟ್ನಲ್ಲಿ ತಂದೆ ಅಕಾಲಿಕವಾಗಿ ನಿಧನರಾದಾಗ, ನನಗೆ ಮತ್ತು ನನ್ನ ಮೂವರು ಸಹೋದರರಿಗೆ ಒಂದು ಕೊಠಡಿ ಹಾಗೂ ಒಂದು ಕೋಟ್ನ್ನು ಬಿಟ್ಟು ಹೋದರು. ನಾವು ಅಲ್ಲಿಯೇ ನಮ್ಮ ಜೀವನವನ್ನು ನಡೆಸಿದೆವು.’ ಎಂದು ಶಾಸ್ತ್ರೀ ಹೇಳಿದ್ದಾರೆ. ನಮ್ಮ ತಂದೆ ಸರಳ ಜೀವಿ, ಯಾವುದೇ ವೈಯಕ್ತಿಕ ಲಾಭವಿಲ್ಲದೇ ಕೇವಲ ದೇಶದ ಏಳ್ಗೆಗಾಗಿ ದುಡಿದು ಭಾರತವನ್ನು ಹೆಮ್ಮೆಪಡುವಂತೆ ಮಾಡುವಲ್ಲಿ ತಮ್ಮ ಜೀವನವನ್ನು ಸವೆಸಿದ್ದರು ಎಂದು ಅವರು ಹೇಳಿದ್ದಾರೆ.
ಪ್ರಧಾನಿ ಮೋದಿ ಕೂಡ ನಮ್ಮ ತಂದೆಯಂತೆಯೇ ಕೆಲಸ ಮಾಡುತ್ತಿದ್ದಾರೆ. ಜಗತ್ತಿನಾದ್ಯಂತ ಭಾರತದ ಗೌರವವನ್ನು ಹೆಚ್ಚಿಸುತ್ತಿದ್ದಾರೆ. ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ನಂತಹ ಸಮಗ್ರ ಬೆಳವಣಿಗೆಯ ಯೋಜನೆಗಳನ್ನು ಪ್ರಧಾನಿ ಮೋದಿ ರೂಪಿಸುತ್ತಿದ್ದಾರೆ ಎಂದು ಸುನೀಲ ಶಾಸ್ತ್ರೀ ಹೇಳಿದ್ದಾರೆ.
ಇಂದಿನ ಭಾರತೀಯ ರಾಜಕೀಯ ರಂಗದಲ್ಲಿ ಪ್ರಧಾನಿ ಮೋದಿಗೆ ಪರ್ಯಾಯವಾಗಿ ಯಾರು ಇಲ್ಲ. ಹಾಗೂ 2019ರ ಚುನಾವಣೆಯಲ್ಲಿ ಬಿಜೆಪಿಯು ದಾಖಲೆಯ ಸ್ಥಾನಗಳೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಅವರು ಭವಿಷ್ಯ ನುಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.