ನವದೆಹಲಿ: ದೇಶದಾದ್ಯಂತ ಇರುವ ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯಗಳನ್ನು ಸುಧಾರಣೆಗೊಳಿಸಲು ಕೇಂದ್ರ ಯೋಜನೆ ರೂಪಿಸಿದೆ ಎಂದು ಎಚ್ಆರ್ಡಿ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.
ಹೈಯರ್ ಎಜುಕೇಶನ್ ಫಂಡಿಂಗ್ ಏಜೆನ್ಸಿ(ಎಚ್ಇಎಫ್ಎ) ಮುಂದಿನ ನಾಲ್ಕು ವರ್ಷಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿಗೆ ರೂ.1ಲಕ್ಷ ಕೋಟಿಯಷ್ಟು ಹಣವನ್ನು ಹೊಂದಿಸಲಿದೆ ಎಂದಿದ್ದಾರೆ.
2022ರ ವರೆಗೆ ಮೂಲಸೌಕರ್ಯ ಕೊರತೆಗಳನ್ನು ನೀಗಿಸಲು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಲಭ್ಯವಾಗುವಂತೆ ಮಾಡುತ್ತೇವೆ ಎಂದಿದ್ದಾರೆ.
2016-17ರ ಕೇಂದ್ರ ಬಜೆಟ್ನಲ್ಲಿ ನರೇಂದ್ರ ಮೋದಿ ಸರ್ಕಾರ ಎಚ್ಇಎಫ್ಎ ಸ್ಥಾಪನೆಯನ್ನು ಘೋಷಿಸಿತ್ತು. ಇದೊಂದು ಆದಾಯೇತರ ಮಂಡಳಿಯಾಗಿದ್ದು, ವಿವಿಧ ವಲಯಗಳಿಂದ ಹಣ ಸಂಗ್ರಹಿಸಿ ಅದನ್ನು ಸಿಎಸ್ಆರ್ ಫಂಡ್ಸ್ ಮತ್ತು ಅನುದಾನಗಳಿಗೆ ಪೂರೈಕೆ ಮಾಡುತ್ತದೆ. ಸಂಸ್ಥೆಗಳಿಗೆ ಬಡ್ಡಿ ರಹಿತವಾಗಿ ಈ ಹಣವನ್ನು ಸಾಲದ ರೂಪದಲ್ಲಿ ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.