ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಆರ್ಥಿಕ ಅಭಿವೃದ್ಧಿ ಅತೀ ಅಗತ್ಯ. ಹಿಂದಿನ ಸರಕಾರದ ಗೊತ್ತುಗುರಿಯಿಲ್ಲದ ಆರ್ಥಿಕ ನೀತಿಗಳು ಹಾಗೂ ಮಿತಿಮೀರಿದ ಭ್ರಷ್ಟಾಚಾರವು ದೇಶದ ಆರ್ಥಿಕತೆಯನ್ನೇ ಹಳ್ಳಹಿಡಿಸಿದ್ದವು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ನಾಲ್ಕು ವರ್ಷಗಳ ಕಾಲದ ಸಮರ್ಥ ಆಡಳಿತದ ಮೂಲಕ ದೇಶದ ಆರ್ಥಿಕತೆಯನ್ನು ಮತ್ತೆ ಹಳಿಗೆ ತಂದು ಕೂರಿಸಿದ್ದಾರೆ.
ದೇಶದ ಅಭಿವೃದ್ಧಿಯ ಸೂಚಕಗಳು ಈ ಕೆಳಗಿನಂತಿವೆ.
ಪ್ರಪಂಚದ 5 ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗುವತ್ತ ಭಾರತ
2013-14 ರಲ್ಲಿ ಭಾರತವು ಪ್ರಪಂಚದ 10 ನೇ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿತ್ತು. ಆದರೆ ಮೋದಿ ಆಡಳಿತದಲ್ಲಿ ಕ್ಷಿಪ್ರ ಆರ್ಥಿಕ ಬೆಳವಣಿಗೆಯನ್ನು ಸಾಧಿಸಿದ ಭಾರತ ಬ್ರೆಜಿಲ್, ರಷ್ಯಾ, ಇಟಲಿ, ಫ್ರಾನ್ಸ್ಗಳನ್ನು ಹಿಂದಿಕ್ಕಿ 6 ನೇ ಸ್ಥಾನಕ್ಕೆ ಏರಿದೆ. ಈಗ 5 ನೇ ಸ್ಥಾನದಲ್ಲಿರುವ ಇಂಗ್ಲೆಂಡ್/ ಯುನೈಟೆಡ್ ಕಿಂಗ್ಡಮ್(ಯುಕೆ) ನ ಸರಿಸಮಾನವಾದ ಆರ್ಥಿಕತೆಯನ್ನು ಸಾಧಿಸಿರುವ ಭಾರತ 2018 ರ ಒಳಗೇ ಇಂಗ್ಲೆಂಡನ್ನು 6 ನೇ ಸ್ಥಾನಕ್ಕೆ ತಳ್ಳಿ 5 ನೇ ಸ್ಥಾನಕ್ಕೆ ಏರಲಿದೆ.
https://www.investopedia.com/articles/investing/022415/worlds-top-10-economies.asp
ಪ್ರಪಂಚದಲ್ಲಿ ಅತೀ ವೇಗವಾಗಿ ಬೆಳವಣಿಗೆ ದಾಖಲಿಸುತ್ತಿರುವ ಒಟ್ಟು ದೇಶಿ ಉತ್ಪನ್ನ ದರ(ಜಿಡಿಪಿ)
2017-18 ರ ಕೊನೆಯ ತ್ರೈಮಾಸಿಕದಲ್ಲಿ(ಜನವರಿ 2018 ಹಾಗೂ ಮಾರ್ಚ್ 2018 ರ ನಡುವಿನ 3 ತಿಂಗಳ ಅವಧಿ) ಭಾರತದ ಜಿಡಿಪಿ ಅಭಿವೃದ್ಧಿ ದರವು 7.7 % ಆಗಿತ್ತು. ಜಿಡಿಪಿ ಅಭಿವೃದ್ಧಿ ಯಲ್ಲಿ 2 ನೇ ಸ್ಥಾನದಲ್ಲಿರುವ ಚೀನಾವು ಈ ಅವಧಿಯಲ್ಲಿ 6.5% ಜಿಡಿಪಿಯನ್ನು ಮಾತ್ರ ಸಾಧಿಸಿದೆ.
https://m.economictimes.com/news/economy/indicators/indias-gdp-grows-at-robust-7-7-in-q4-of-fy18-full-year-growth-at-6-7/amp_articleshow/64401144.cms
255% ದಷ್ಟು ನೇರ ವಿದೇಶೀ ಹೂಡಿಕೆಯನ್ನು ಹೆಚ್ಚಿಸಿಕೊಂಡ ಭಾರತ
ಕಳೆದ 4 ವರ್ಷಗಳಲ್ಲಿ ಭಾರತದಲ್ಲಿ ಆದ ನೇರ ವಿದೇಶೀ ಹೂಡಿಕೆಯ ಪ್ರಮಾಣ 255% ಹೆಚ್ಚಾಗಿದೆ. 2013-14 ರಲ್ಲಿ ಭಾರತದಲ್ಲಾದ ನೇರ ವಿದೇಶೀ ಹೂಡಿಕೆಯು 24.3 ಬಿಲಿಯನ್ ಡಾಲರ್ ಗಳಾದರೆ, 2017-18 ರಲ್ಲಿ ಭಾರತದಲ್ಲಾದ ನೇರ ವಿದೇಶೀ ಹೂಡಿಕೆಯು 61.96 ಬಿಲಿಯನ್ ಡಾಲರ್ ಆಗಿದೆ.
https://m.economictimes.com/markets/stocks/news/fdi-in-india-rises-to-61-96-billion-in-2017-18-government/amp_articleshow/64506567.cms
ವಿದೇಶೀ ವಿನಿಮಯ ಸಂಗ್ರಹದಲ್ಲಿ ಗಣನೀಯ ಹೆಚ್ಚಳ
ಮಾರ್ಚ್ 2014 ಕ್ಕೆ ಭಾರತದಲ್ಲಿ ಸಂಗ್ರಹವಾಗಿದ್ದ ವಿದೇಶೀ ವಿನಿಮಯವು 271 ಬಿಲಿಯನ್ ಡಾಲರ್ ಆಗಿತ್ತು. ಆದರೆ ಎಪ್ರಿಲ್ 2018 ರಲ್ಲಿ ಭಾರತದಲ್ಲಿ ಸಂಗ್ರಹವಾಗಿದ್ದ ವಿದೇಶೀ ವಿನಿಮಯವು 424 ಬಿಲಿಯನ್ ಬಿಲಿಯನ್ ಡಾಲರ್ ಆಗಿದೆ. ಕಳೆದ 4 ವರ್ಷಗಳಲ್ಲಿ 153 ಬಿಲಿಯನ್ ಡಾಲರ್ಗಳಷ್ಟು ಹೆಚ್ಚು ವಿದೇಶಿ ವಿನಿಮಯವು ಸಂಗ್ರಹವಾಗಿದೆ ವಿದೇಶಿ ವಿನಿಮಯದಲ್ಲಿ 56% ಹೆಚ್ಚಳ ಆಗಿರುವುದು ಅದ್ಭುತ ಸಾಧನೆ.
https://m.timesofindia.com/business/india-business/indias-forex-reserves-rise-to-life-time-high-of-424-billion/amp_articleshow/63645577.cms
4 ವರ್ಷಗಳಲ್ಲಿ 58% ವೃದ್ಧಿಸಿದ ಶೇರು ಮಾರುಕಟ್ಟೆ
ಮಾರ್ಚ್ 2014 ರಲ್ಲಿ ಬಾಂಬೇ ಸ್ಟಾಕ್ ಎಕ್ಸ್ಚೇಂಜ್ ಸೂಚ್ಯಂಕವು 22500 ದ ಆಸುಪಾಸಿನಲ್ಲಿತ್ತು. ದಿನಾಂಕ 14/06/18 ರಂದು 35599 ರಷ್ಟು ಇತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಬಿಎಸ್ ಸಿ ಸೂಚ್ಯಂಕವು 13100 ಪಾಯಿಂಟ್ ಗಳ ವೃದ್ಧಿಯನ್ನು ಕಂಡಿದೆ. ನಿಫ್ಟಿ ಸೂಚ್ಯಂಕವೂ ಇದೇ ಶೇಕಡಾ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದೆ.
https://www.business-standard.com/article/news-cm/sensex-vaults-almost-6-in-march-2014-114033100628_1.html
ಸರಾಗವಾಗಿ ವ್ಯವಹಾರ ನಡೆಸಬಲ್ಲ (Ease of Doing Business) ರಾಷ್ಟ್ರಗಳ ಪಟ್ಟಿಯಲ್ಲಿ 100 ನೇ ಸ್ಥಾನಕ್ಕೆ ಏರಿಕೆ
ದೇಶದಲ್ಲಿನ ಭ್ರಷ್ಟಾಚಾರ, ರೆಡ್ ಟೇಪಿಸಂ, ಮೂಲಭೂತ ಸೌಲಭ್ಯಗಳ ಕೊರತೆ, ಸ್ಪಂದನಾರಹಿತ ಸರಕಾರ ಮುಂತಾದ ಕಾರಣಗಳಿಂದ ಭಾರತವು 2014 ರಲ್ಲಿ ಸರಾಗವಾಗಿ ವ್ಯವಹಾರ ನಡೆಸಬಲ್ಲ (Ease of Doing Business) ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು 142 ನೇ ಸ್ಥಾನಕ್ಕೆ ಕುಸಿದಿತ್ತು. ಇದರ ಪರಿಣಾಮವಾಗಿ ಭಾರತದಲ್ಲಿ ಹೂಡಿಕೆ ಮಾಡಲು ಯಾವುದೇ ವಿದೇಶೀ ಉದ್ದಿಮೆದಾರರು/ ಕಂಪೆನಿಗಳು ಬರುತ್ತಿರಲಿಲ್ಲ. ಆದರೆ ನರೇಂದ್ರ ಮೋದಿ ಸರಕಾರವು ಹೂಡಿಕೆ ಕಾನೂನಿನಲ್ಲಿ ಮಾಡಿದ ಸಕಾರಾತ್ಮಕ ಬದಲಾವಣೆ, ಓಬೀರಾಯನ ಕಾಲದ ಕಾನೂನುಗಳ ಸುಧಾರಣೆ,ಸರಕಾರದ ಹಾಗೂ ಅಧಿಕಾರೀ ವಲಯದಲ್ಲಿ ಹೆಚ್ಚಿದ ಸ್ಪಂದನಾಶೀಲತೆ, ಉತ್ತಮಗೊಂಡ ವಿದ್ಯುತ್,ರಸ್ತೆ ಮುಂತಾದ ಕಾರಣಗಳಿಂದ ಭಾರತವು ತನ್ನ ಸ್ಥಾನವನ್ನು ಕ್ರಮವಾಗಿ ಏರಿಸಿಕೊಳ್ಳುತ್ತಾ 142 ನೇ ಸ್ಥಾನದಿಂದ 100 ನೇ ಸ್ಥಾನಕ್ಕೆ ಏರಿದೆ.
https://www.firstpost.com/business/ease-of-doing-business-live-arun-jaitley-to-hold-press-conference-at-7-30-pm-post-release-of-report-4185601.html
ಸಾರ್ವಕಾಲಿಕ ಗರಿಷ್ಠ ನೇರ ತೆರಿಗೆ ಸಂಗ್ರಹಿಸಿದ ಭಾರತ
ಆದಾಯ ತೆರಿಗೆ, ಆಸ್ತಿ ತೆರಿಗೆ ಮುಂತಾದವುಗಳು ನೇರ ತೆರಿಗೆ ಎಂದು ಕರೆಯಲ್ಪಡುತ್ತವೆ. 2017-18 ರಲ್ಲಿ ಭಾರತದಲ್ಲಿ 10.02 ಲಕ್ಷ ಕೋಟಿ ರುಪಾಗಳಷ್ಟು ನೇರ ತೆರಿಗೆಯು ಸಂಗ್ರಹವಾಗಿದೆ. 2013-14 ರಲ್ಲಿ ಸಮಗ್ರವಾದ ನೇರ ತೆರಿಗೆ 5.83 ಲಕ್ಷ ಕೋಟಿಗಳು. 2013-14 ರಲ್ಲಿ ಸಂಗ್ರಹವಾದ ನೇರ ತೆರಿಗೆಯನ್ನು ಹೋಲಿಸಿದರೆ 2017-18 ರಲ್ಲಿ 172% ಹೆಚ್ಚಿನ ತೆರಿಗೆ ಸಂಗ್ರಹವಾಗಿದೆ. ಹೆಚ್ಚಾದ ನೇರ ತೆರಿಗೆಯ ಸಂಗ್ರಹವು ಜನರಲ್ಲಿ ಹೆಚ್ಚಾದ ಆದಾಯವನ್ನು ಸೂಚಿಸುತ್ತದೆ.
https://m.timesofindia.com/business/india-business/direct-tax-collections-surge-18-to-rs-10-02-lakh-crore-in-fy18-jaitley/articleshow/63608704.cms
ಇವುಗಳೆಲ್ಲದರ ಹೊರತಾಗಿ ಈ ಕೆಳಗೆ ಹೇಳಿದ ವಿಚಾರಗಳು ಭಾರತವು ವಿಶ್ವ ಆರ್ಥಿಕತೆಯಲ್ಲಿ ತನ್ನದೇ ಆದ ಛಾಪನ್ನು ಹೇಗೆ ಮೂಡಿಸುತ್ತಿದೆ ಎನ್ನುವುದನ್ನು ತಿಳಿಸುತ್ತವೆ.
ಮೋದಿ ಸರಕಾರದ ಕಳೆದ 4 ವರ್ಷಗಳ ಮೇಕ್ ಇನ್ ಇಂಡಿಯಾ ಯೋಜನೆಯ ಫಲವಾಗಿ ದೇಶವು ಹೆಚ್ಚು ಮೊಬೈಲ್ ಫೋನ್ ತಯಾರಿಕೆಯಲ್ಲಿ ಜಗತ್ತಿನ ಎರಡನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ.
ಅಟೋಮೊಬೈಲ್ ಕ್ಷೇತ್ರದಲ್ಲಿ ಭಾರತವಿಂದು ಅಂದರೆ 2017-18 ರಲ್ಲಿ ಪ್ರಪಂಚದ 2 ನೇ ಅತೀ ಹೆಚ್ಚು ಉತ್ಪಾದಕ ರಾಷ್ಟ್ರವಾಗಿ ಬೆಳೆದಿದೆ. ಇದು ಕೂಡಾ ಮೇಕ್ ಇನ್ ಇಂಡಿಯಾದ ಯೋಜನೆಯ ಪರಿಣಾಮ.
ಭಾರತವಿಂದು ಕಚ್ಛಾ ಉಕ್ಕು (Crude Steel) ಉತ್ಪಾದನೆಯಲ್ಲಿ ಲೋಕದ 2 ನೇ ಅತೀ ಹೆಚ್ಚು ಉತ್ಪಾದಕ ರಾಷ್ಟ್ರವಾಗಿ ಬೆಳೆದಿದೆ. 2015 ರಲ್ಲಿ ಉಕ್ಕು ಉತ್ಪಾದನೆಯಲ್ಲಿ ಅಮೇರಿಕವನ್ನು ಹಿಂದಿಕ್ಕಿದ್ದ ಭಾರತ 2018 ರಲ್ಲಿ ಜಪಾನನ್ನು ಹಿಂದಿಕ್ಕಿ 2 ಸ್ಥಾನಕ್ಕೆ ಏರಿದೆ.
ವಿದ್ಯುತ್ ಉತ್ಪಾದನೆಯಲ್ಲಿ 2018 ರಲ್ಲಿ ಭಾರತವು ರಷ್ಯಾ ದೇಶವನ್ನು ಹಿಂದಿಕ್ಕಿ ಜಗತ್ತಿನ 3 ನೇ ಅತೀ ದೊಡ್ಡ ವಿದ್ಯುತ್ ಉತ್ಪಾದಕ ರಾಷ್ಟ್ರವಾಗಿ ಬೆಳೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.