ನವದೆಹಲಿ: 2021ರ ಬಳಿಕ ದೇಶದ ವಿಶ್ವವಿದ್ಯಾಲಯಗಳಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ಗಳ ನೇರ ನೇಮಕಾತಿಗೆ ಪಿಎಚ್ಡಿ ಪದವಿ ಕಡ್ಡಾಯವಾಗಲಿದೆ. ಈ ಬಗ್ಗೆ ಕೇಂದ್ರ ಮಾನವಸಂಪನ್ಮೂಲ ಸಚಿವಾಲಯ ಅಧಿಸೂಚನೆಯನ್ನು ಹೊರಡಿಸಿದೆ.
ಕಾಲೇಜುಗಳಲ್ಲಿ ನೇರ ನೇಮಕಾತಿಗೆ ನೆಟ್(National Eligibility Test ) ಪರೀಕ್ಷೆಯೊಂದಿಗೆ ಸ್ನಾತಕೋತ್ತರ ಪದವಿ ಹೊಂದುವುದು ಕಡ್ಡಾಯವಾಗಲಿದೆ.
ಕೇಂದ್ರ ಎಚ್ಆರ್ಡಿ ಸಚಿವ ಪ್ರಕಾಶ್ ಜಾವ್ಡೇಕರ್ ಯುಜಿಸಿಯ ಈ ಹೊಸ ನಿರ್ದೇಶನಗಳ ಬಗ್ಗೆ ಘೋಷಣೆ ಮಾಡಿದ್ದು, ಕಾಲೇಜು ಉಪನ್ಯಾಸಕರು ಬೋಧನೆಗೆ ಹೆಚ್ಚಿನ ಗಮನ ನೀಡಲಿ ಎನ್ನುವ ಕಾರಣಕ್ಕೆ ‘ಅಕಾಡಮಿಕ್ ಪಫಾರ್ಮೆನ್ಸ್ ಇಂಡಿಕೇಟರ್’ನ್ನು ಕೈ ಬಿಡಲಾಗಿದೆ ಎಂದರು.
ಉನ್ನತ ಶಿಕ್ಷಣದ ಗುಣಮಟ್ಟವನ್ನು ವೃದ್ಧಿಸಬೇಕು ಮತ್ತು ದೇಶದ ಉತ್ತಮ ಪ್ರತಿಭೆಗಳನ್ನು ಬೆಳಕಿಗೆ ತರಬೇಕು ಎನ್ನುವ ಉದ್ದೇಶದಿಂದ ಈ ಪ್ರಯತ್ನಗಳನ್ನು ಮಾಡಲಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.