ರಾಯ್ಪುರ: ಪ್ರಧಾನಿ ನರೇಂದ್ರ ಮೋದಿ ಗುರುವಾರ ಛತ್ತೀಸ್ಗಢದ ಭವಿಷ್ಯದ ರಾಜಧಾನಿ ನಯಾ ರಾಯ್ಪುರದಲ್ಲಿ ಹೈಟೆಕ್ ಆದ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಸೆಟ್ ಅಪ್ನ್ನು ಲೋಕಾರ್ಪಣೆಗೊಳಿಸಿದರು.
ಈ ಸೆಂಟರ್ ನೀರು ಸರಬರಾಜು, ವಿದ್ಯುತ್ ಪೂರೈಕೆ, ನೈರ್ಮಲ್ಯ, ಸಾರಿಗೆ ಚಲನವಲನ, ಏಕೀಕೃತ ನಿರ್ಮಾಣ ನಿರ್ವಹಣೆ, ನಗರ ಸಂಪರ್ಕ, ಇಂಟರ್ನೆಟ್ ಮೂಲಸೌಕರ್ಯಗಳನ್ನು ಒಂದೇ ವೇದಿಕೆಯಡಿ ಆನ್ಲೈನ್ ಮೂಲಕ ಪರಿಶೀಲನೆ ಮತ್ತು ನಿಯಂತ್ರಣ ಮಾಡಲಿದೆ.
ನಯಾ ರಾಯ್ಪುರ ನಗರದ ಮೇಲ್ವಿಚಾರಣೆಯನ್ನೂ ಈ ಸೆಂಟರ್ ಆನ್ಲೈನ್ ಮೂಲಕ ನಿರ್ವಹಿಸಲಿದೆ.
ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ನ್ನು ಜಿಐಎಸ್ ಮೂಲಕ ನಿರ್ವಹಿಸಲಾಗುತ್ತದೆ. ಸಹಾಯವಾಣಿಗಳ ಮೂಲಕ ಇಲ್ಲಿಗೆ ನಿವಾಸಿಗಳು ತಮ್ಮ ದೂರುಗಳನ್ನು ನೀಡಬಹುದಾಗಿದೆ.
ಈ ಸೆಂಟರ್ನ್ನು ವೀಕ್ಷಣೆ ಮಾಡಿದ ಮೋದಿ, ಅಲ್ಲಿದ್ದ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಇಂದು ಅವರು ಎಸ್ಎಐಎಲ್ನ ವಿಸ್ತರಿಸಿದ ಮತ್ತು ಆಧುನೀಕರಿಸಿದ ಭಿಲಾಯ್ ಸ್ಟೀಲ್ ಪ್ಲಾಂಟ್ನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.