ತಿರುವನಂತಪುರಂ: ಭಾರೀ ಆತಂಕವನ್ನು ಸೃಷ್ಟಿಸಿದ್ದ ನಿಫಾ ವೈರಸ್ ಪ್ರಸ್ತುತ ನಿಯಂತ್ರಣದಲ್ಲಿದೆ, ಹೊಸದಾಗಿ ವೈರಸ್ ತಗಲುವ ಸಾಧ್ಯತೆಗಳು ತೀರಾ ಕಡಿಮೆಯಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಸ್ಪಷ್ಟಪಡಿಸಿದ್ದಾರೆ.
‘ಮೇ.31ರ ಬಳಿಕ ನಿಫಾ ವೈರಸ್ ತಗುಲಿದ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಹೀಗಾಗಿ ವೈರಸ್ ಹರಡುವಿಕೆ ನಿಯಂತ್ರಣದಲ್ಲಿದೆ ಎಂಬುದಾಗಿ ಹೇಳಬಹುದು. ಆದರೆ ಜುಲೈ 30ರವರೆಗೆ ನಾವು ಕಾದು ನೋಡಬೇಕಿದೆ. 45 ದಿನಗಳ ಕಾಲಾವಧಿ ಅಗತ್ಯವಾಗಿದ್ದು, ಇದು ಕೇವಲ ಸುರಕ್ಷತಾ ವಿಧಾನವಷ್ಟೇ. ಯಾವುದೇ ಹೊಸ ಪ್ರಕರಣಗಳು ಇನ್ನು ಮುಂದೆ ದಾಖಲಾಗದು ಎಂಬ ದೃಢ ನಂಬಿಕೆ ಇದೆ’ ಎಂದಿದ್ದಾರೆ.
ನಿಫಾ ವೈರಸ್ ಬಗೆಗಿನ ಆತಂಕ ಹೋಗಲಾಡಿಸಲು ಶ್ರಮಿಸಿದ ಆರೋಗ್ಯ ಇಲಾಖೆ ಮತ್ತು ಸರ್ಕಾರಕ್ಕೆ ಸಹಕಾರ ನೀಡಿದ ವಿರೋಧ ಪಕ್ಷಗಳನ್ನು ಸಚಿವೆ ಈ ವೇಳೆ ಅಭಿನಂದಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.