ನವದೆಹಲಿ: ಕಿತ್ತು ತಿನ್ನುವ ಬಡತನ, ಪೋಷಕರ ಅಸಡ್ಡೆ, ಬಲವಂತದ ಕಾರಣಕ್ಕಾಗಿ ವಿಶ್ವದಾದ್ಯಂತ ಕೋಟ್ಯಾಂತರ ಮಕ್ಕಳು ಬಾಲ ಕಾರ್ಮಿಕರಾಗಿ ಬದುಕು ಸವೆಸುತ್ತಿದ್ದಾರೆ. ಬಾಲ್ಯದ ತುಂಟಾಟಗಳಿಲ್ಲದೆ, ಪೋಷಕರ ಪೋಷಣೆಯಿಲ್ಲದೆ, ಅಕ್ಷರಗಳ ಜ್ಞಾನ ಸಂಪಾದನೆ ಇಲ್ಲದೆ ಈ ಮಕ್ಕಳ ಬದುಕು ಕಮರಿ ಹೋಗುತ್ತಿದೆ.
ಬಾಲ್ಯ ಕಾರ್ಮಿಕತನವನ್ನು ನಿರ್ಮೂಲನೆ ಮಾಡುವ ಗುರಿಯೊಂದಿಗೆ ’ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ’ 2002ರಿಂದ ಪ್ರತಿವರ್ಷ ಜೂನ್ 12ನ್ನು ‘ಬಾಲಕಾರ್ಮಿಕ ವಿರೋಧಿ ದಿನ’ವನ್ನಾಗಿ ಆಚರಿಸುತ್ತಿದೆ. ಸರ್ಕಾರಗಳನ್ನು, ಜನರನ್ನು, ಉದ್ಯೋಗಿಗಳನ್ನು ಒಂದೆಡೆ ತಂದು ಬಾಲಕಾರ್ಮಿಕತನದ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ವಿಶ್ವದಾದ್ಯಂತ ಪ್ರಸ್ತುತ 150 ಮಿಲಿಯನ್ ಬಾಲ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ. 2011ರ ಸೆನ್ಸಸ್ ಪ್ರಕಾರ ಭಾರತದಲ್ಲಿ 4.5 ಮಿಲಿಯನ್ ಬಾಲ ಕಾರ್ಮಿಕರಿದ್ದು, ಇವರ ವಯಸ್ಸು 5-15 ಆಗಿದೆ. ಅಪಾಯಕಾರಿ ಕೈಗಾರಿಕೆಗಳಲ್ಲಿ, ಮನೆಗಳಲ್ಲಿ, ಕಟ್ಟಡ ನಿರ್ಮಾಣಗಳಲ್ಲಿ ಅತೀಹೆಚ್ಚು ಸಂಖ್ಯೆಯ ಮಕ್ಕಳು ದುಡಿಯುತ್ತಿದ್ದಾರೆ ಇದು ಅವರ ಆರೋಗ್ಯದ ಮೇಲೂ ವ್ಯತಿರಿಕ್ತ ಪ್ರಭಾವವನ್ನು ಉಂಟು ಮಾಡುತ್ತಿದೆ. ಮಾಲೀಕರ ದೌರ್ಜನ್ಯಗಳನ್ನೂ ಇವರು ಸಹಿಸಿಕೊಳ್ಳಬೇಕಾಗುತ್ತದೆ.
ಹಲವಾರು ಕಾಯ್ದೆಗಳನ್ನು ತಂದರೂ ಇನ್ನೂ ಬಾಲ ಕಾರ್ಮಿಕತನ ಜೀವಂತವಾಗಿರುವುದು ನಮ್ಮ ವ್ಯವಸ್ಥೆಯ ವೈಫಲ್ಯವನ್ನು ಸಾರಿ ಹೇಳುತ್ತದೆ. ಕೈಗಾರಿಕಗಳಲ್ಲಿ, ಮಾಲೀಕರ ದೌರ್ಜನ್ಯದಲ್ಲಿ ಕಮರಿ ಹೋಗುತ್ತಿರುವ ಮುಗ್ಧ ಮಕ್ಕಳ ಜೀವನವನ್ನು ಸರಿ ದಾರಿಗೆ ತರುವ, ಅವರಿಗೆ ಉತ್ತಮ ಭವಿಷ್ಯ ಕಲ್ಪಿಸುವ ಹೊಣೆ ನಾಗರಿಕ ಸಮಾಜದ ಎಲ್ಲರ ಕರ್ತವ್ಯವೂ ಹೌದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.