ನವದೆಹಲಿ: ರೈಲ್ವೇ ಕೇಟರಿಂಗ್ನ ದುಬಾರಿ ಬೆಲೆಯಿಂದ ನೀವು ಬೇಸತ್ತಿದ್ದೀರಾ? ಹಾಗಿದ್ದರೆ ಇನ್ನು ಮುಂದೆ ಆಹಾರದ ಗರಿಷ್ಠ ರಿಟೇಲ್ ದರವನ್ನು(ಎಂಆರ್ಪಿ) ಐಆರ್ಸಿಟಿಸಿಯ ಹೊಸದಾಗಿ ಆರಂಭಗೊಂಡಿರುವ ‘ಮೆನು ಆನ್ ರೈಲ್’ ಅಪ್ಲಿಕೇಶನ್ನಲ್ಲಿ ಪರಿಶೀಲಿಸಿಕೊಳ್ಳಿ.
ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಸೋಮವಾರ ‘ಮೆನು ಆನ್ ರೈಲ್’ ಅಪ್ಲಿಕೇಶನನ್ನು ಲೋಕಾರ್ಪಣೆಗೊಳಿಸಿದರು.
ಈ ಆ್ಯಪ್ ರೈಲುಗಳಲ್ಲಿ ಮಾರಾಟವಾಗುವ ಆಹಾರಗಳ ನಿಜವಾದ ದರದ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಹಮ್ಸಫರ್ ಟ್ರೈನ್, ರಾಜಧಾನಿ, ಶತಾಬ್ದಿ, ಡುರೊಂಟೋ, ಗಟಿಮನ್ ಎಕ್ಸ್ಪ್ರೆಸ್, ತೇಜಸ್ ಎಕ್ಸ್ಪ್ರೆಸ್ ಸೇರಿದಂತೆ ಮೇಲ್/ಎಕ್ಸ್ಪ್ರೆಸ್ಗಳ ಆಹಾರಗಳ ದರವನ್ನು ಇದರಲ್ಲಿ ಪರಿಶೀಲಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.