ನವದೆಹಲಿ: ರೈಲ್ವೇಯನ್ನು ಖಾಸಗೀಕರಣಗೊಳಿಸುವ ಯಾವ ಯೋಜನೆಯೂ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಸ್ಪಷ್ಟಪಡಿಸಿದ್ದಾರೆ.
ರೈಲ್ವೇ ಸಚಿವಾಲಯದ ನಾಲ್ಕು ವರ್ಷಗಳ ಸಾಧನೆಯ ಬಗ್ಗೆ ತಿಳಿಸಲು ಸುದ್ದಿಗೋಷ್ಠಿ ಕರೆದಿದ್ದ ಅವರು, ‘ರೈಲ್ವೇಯನ್ನು ಖಾಸಗೀಕರಣಗೊಳಿಸುವ ಯಾವ ಯೋಜನೆಯೂ ನಮಗಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ, ಇನ್ನು ಕೆಲವೇ ವರ್ಷಗಳಲ್ಲಿ ರೈಲ್ವೇಯ ಆದಾಯ ದ್ವಿಗುಣಗೊಳಿಸುವತ್ತ ಕಾರ್ಯೋನ್ಮುಖರಾಗಿದ್ದೇವೆ’ ಎಂದಿದ್ದಾರೆ.
ರೈಲ್ವೇಯು ಆಧುನೀಕರಣ ಮತ್ತು ತಾಂತ್ರಿಕ ಅಪ್ಗ್ರೇಡ್ಗಳಿಗಾಗಿ ವಿದೇಶಿ ಬಂಡವಾಳವನ್ನು ಎದುರು ನೋಡುತ್ತಿದೆ. ಆದರೆ ಇದು ಖಾಸಗೀಕರಣ ಮಾಡುವ ಭಾಗವಲ್ಲ ಎಂದು ಅವರು ಹೇಳಿದ್ದಾರೆ.
2014ರ ಬಳಿಕ ರೈಲ್ವೇಯ ಮೂಲಸೌಕರ್ಯ ಖರ್ಚು ರೂ.5.29 ಲಕ್ಷ ಕೋಟಿಯಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.