ಬೆಂಗಳೂರು: ವಿವಿಧ ಸ್ಕಾಲರ್ಶಿಪ್ ಯೋಜನೆಗಳನ್ನು ಏಕೀಕೃತಗೊಳಿಸುವ ಸಲುವಾಗಿ ರಾಜ್ಯ ಸರ್ಕಾರ ಆಧಾರ್ ಆಧಾರಿತ ಡಿಜಿಟಲ್ ವೇದಿಕೆಯೊಂದನ್ನು ಸೃಸ್ಟಿಸಿದೆ. ಸೋರಿಕೆಯನ್ನು ತಡೆಗಟ್ಟುವ ಸಲುವಾಗಿ ‘ಒನ್ ಸ್ಟುಡೆಂಟ್, ಒನ್ ಸ್ಕಾಲರ್ಶಿಪ್’ ನಿಯಮವನ್ನು ಜಾರಿಗೊಳಿಸಲಾಗುತ್ತಿದೆ.
ಈ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಸ್ಕಾಲರ್ಶಿಪ್ಗೆ ಸಾಮಾನ್ಯ ಅರ್ಜಿ ಸಲ್ಲಿಸಬಹುದಾಗಿದೆ, ಸರ್ಕಾರಿ ಇಲಾಖೆಗಳನ್ನು ಅಳೆಯುವ ಅಗತ್ಯವಿರುವುದಿಲ್ಲ. ಅದಕ್ಕೂ ಮಿಗಿಲಾಗಿ ವಿದ್ಯಾರ್ಥಿಗಲು ಸಮಯಕ್ಕೆ ಸರಿಯಾಗಿ ಸ್ಕಾಲರ್ಶಿಪ್ ಪಡೆದುಕೊಳ್ಳಲು ಇದರಿಂದ ಅನುಕೂಲವಾಗುತ್ತದೆ. ಇದಕ್ಕಾಗಿ ಶೀಘ್ರವೇ ಪೋರ್ಟಲ್ ಒಂದು ಆರಂಭಗೊಳ್ಳಲಿದೆ.
1ನೇ ತರಗತಿಯಿಂದ ಹಿಡಿದು ಉನ್ನತ ವ್ಯಾಸಂಗದವರೆಗಿನ ಎಲ್ಲಾ ಸರ್ಕಾರಿ ಸ್ಕಾಲರ್ಶಿಪ್ ಯೋಜನೆಗಳನ್ನು ಒಂದೇ ಡಿಜಿಟಲ್ ವೇದಿಕೆಯಡಿ ತರಲಾಗುತ್ತಿದೆ. ಇದರಿಂದ ಸ್ಕಾಲರ್ಶಿಪ್ ಮೊತ್ತ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಬಂದು ಬೀಳಳಿದೆ. ಆಗಸ್ಟ್ ವೇಳೆಗೆ ಈ ಪ್ರಕ್ರಿಯೆ ಜಾರಿಗೊಳ್ಳುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.