ಮುಂಬಯಿ: ವಿದ್ಯುತ್ ದೀಪಗಳನ್ನೇ ಕಾಣದಿದ್ದ ಮಹಾರಾಷ್ಟ್ರದ ಮನಚಾಂಬಾ ಆದಿವಾಸಿ ಗ್ರಾಮವೀಗ ವಿದ್ಯುತ್ ದೀಪಗಳ ಬೆಳಕಿನಿಂದ ಕಂಗೊಳಿಸುತ್ತಿದೆ. ಈ ಗ್ರಾಮಕ್ಕೆ ಜನವರಿಯಿಂದ ಸೋಲಾರ್ ಮೈಕ್ರೋಗ್ರಿಡ್ ಮೂಲಕ ವಿದ್ಯುತ್ ಒದಗಿಸಲಾಗುತ್ತಿದೆ.
1950ರಲ್ಲಿ ವೈತರ್ಣ ಮತ್ತು ತನ್ಸಾ ಡ್ಯಾಂ ನಿರ್ಮಾಣದ ವೇಳೆ ಇವರನ್ನು ಬೆಟ್ಟದ ಮೇಲಿರುವ ಮನಚಾಂಬಾ ಗ್ರಾಮಕ್ಕೆ ತಂದು ಬಿಡಲಾಗಿತ್ತು. ಅಲ್ಲಿ ಮಣ್ಣು, ಬಿದಿರುಗಳಿಂದ ಮನೆ ಮಾಡಿಕೊಂಡು ಅವರು ವಾಸವಿದ್ದರು. ವಿದ್ಯುತ್ ಸೇರಿದಂತೆ ಯಾವ ಸೌಕರ್ಯವೂ ಅವರನ್ನು ತಲುಪಿರಲಿಲ್ಲ. ಕೃಷಿ ಕೂಲಿ ಮಾಡಿಕೊಂಡು ಇವರು ಜೀವನ ನಡೆಸುತ್ತಾರೆ.
ಪ್ರಸ್ತುತ ಈ ಗ್ರಾಮದಲ್ಲಿ 225 ಮನೆಗಳಿದ್ದು, ಶೇ.80-85ರಷ್ಟು ಮನೆಗಳಿಗೆ ಸೋಲಾರ್ ಪವರ್ ಗ್ರಿಡ್ ಮೂಲಕ ವಿದ್ಯುತ್ ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.