ನವದೆಹಲಿ: ಸ್ವಚ್ಛ ಭಾರತ ಅಭಿಯಾನ, ಸ್ಮಾರ್ಟ್ ಸಿಟಿಯಂತಹ ಯೋಜನೆಗಳಿಗೆ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದರೂ, ಭಾರತ ಇ-ವೇಸ್ಟ್ ಉತ್ಪಾದನೆಯಲ್ಲಿ ವಿಶ್ವದ ಟಾಪ್ 5 ದೇಶಗಳ ಪಟ್ಟಿಯಲ್ಲೇ ಇದೆ ಎಂದು ASSOCHAM-NEC ನಡೆಸಿದ ಇತ್ತೀಚಿನ ಅಧ್ಯಯನದಿಂದ ತಿಳಿದು ಬಂದಿದೆ.
‘ವಿಶ್ವ ಪರಿಸರ ದಿ 2018’ ಆಚರಣೆಯ ಹಿನ್ನಲೆಯಲ್ಲಿ ಈ ಅಧ್ಯಯನದ ವರದಿಯನ್ನು ಬಿಡುಗಡೆಗೊಳಿಸಲಾಗಿದೆ.
ಇ-ವೇಸ್ಟ್ ಉತ್ಪಾದನೆಯಲ್ಲಿ ಚೀನಾ, ಯುಎಸ್ಎ, ಜಪಾನ್ ಮತ್ತು ಜರ್ಮನ್ ಕ್ರಮವಾಗಿ ಅಗ್ರ 4 ಸ್ಥಾನಗಳಲ್ಲಿ ಕಾಣಿಸಿಕೊಂಡಿದೆ. ಭಾರತದ 5ನೇ ಸ್ಥಾನದಲ್ಲಿದೆ. ವಾರ್ಷಿಕ ಭಾರತದಲ್ಲಿ 2 ಮಿಲಿಯನ್ ಟನ್ ಇ-ವೇಸ್ಟ್ ಉತ್ಪಾದನೆಗೊಳ್ಳುತ್ತದೆ. ಆದರೆ ವಾರ್ಷಿಕ 438,085 ಟನ್ ಮಾತ್ರ ಮರು ಬಳಕೆಗೊಳ್ಳುತ್ತದೆ.
ಭಾರತದಲ್ಲಿ ಮಹಾರಾಷ್ಟ್ರ ಅತೀಹೆಚ್ಚು ಅಂದರೆ ಶೇ.19.8ರಷ್ಟು ಇ-ವೇಸ್ಟ್ ಉತ್ಪಾದಿಸುತ್ತದೆ, ಆದರೆ ವಾರ್ಷಿಕ ಕೇವಲ 47,810 ಟನ್ಗಳಷ್ಟು ಮರು ಬಳಕೆ ಮಾಡಿಕೊಳ್ಳುತ್ತದೆ. ನಂತರ ಸ್ಥಾನ ತಮಿಳುನಾಡಿನದ್ದಾಗಿದ್ದು, ಶೇ.13ರಷ್ಟು ಇ-ವೇಸ್ಟ್ ಉತ್ಪಾದಿಸುತ್ತದೆ ಮತ್ತು 52,427 ಟನ್ ಮರು ಬಳಕೆ ಮಾಡಿಕೊಳ್ಳುತ್ತದೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಉತ್ತರಪ್ರದೇಶ, ಪಶ್ಚಿಮಬಂಗಾಳ, ದೆಹಲಿ, ಕರ್ನಾಟಕ, ಗುಜರಾತ್, ಮಧ್ಯಪ್ರದೇಶಗಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.