ವಿದೇಶಗಳಲ್ಲಿ ನೆಲೆಸಿರುವ ಅನಿವಾಸೀ ಭಾರತೀಯರು ಕೂಡಾ ಮೋದಿ ಆಡಳಿತದಲ್ಲಿ ಹೆಚ್ಚು ಸುರಕ್ಷಿತರಾಗಿದ್ದಾರೆ. ಹೊಟ್ಟೆಪಾಡಿಗೋಸ್ಕರ ವಿದೇಶಗಳಿಗೆ ತೆರಳಿ ಯುದ್ಧ, ಧಾಳಿ, ವಂಚನೆ ಮುಂತಾದ ಸಂದರ್ಭ ಹಾಗೂ ಸಮಸ್ಯೆಗಳಲ್ಲಿ ಸಿಲುಕಿದ್ದ 90,000 ಭಾರತೀಯರನ್ನು ಕಳೆದ 4 ವರ್ಷದ ಬಿಜೆಪಿ ಸರಕಾರದ ಆಡಳಿತ ಕಾಲದಲ್ಲಿ ರಕ್ಷಿಸಲಾಗಿದೆ.
ಯುದ್ಧ ಪೀಡಿತ ಪ್ರದೇಶಗಳಾದ ಯೆಮನ್, ಸಿರಿಯಾ, ಲೆಬನಾನ್, ಇರಾಕ್ ಮುಂತಾದ ದೇಶಗಳಿಂದ ಅಲ್ಲಿ ನೆಲಸಿದ್ದ ಭಾರತೀಯರನ್ನು ರಕ್ಷಿಸಲಾಗಿದೆ. 2015 ರಲ್ಲಿ ಯುದ್ಧ ಪೀಡಿತ ಯೆಮನ್ ದೇಶದಲ್ಲಿ ಸಿಲುಕಿದ್ದ 4640 ಹಾಗೂ ಭಾರತೀಯರನ್ನು ಆಪರೇಶನ್ ರಾಹತ್ ಎಂಬ ಭಾರಿ ಕಾರ್ಯಚರಣೆಯ ಮೂಲಕ ರಕ್ಷಿಸಲಾಗಿತ್ತು. ಜೊತೆಗೆ 960 ಮಂದಿ ಅಮೇರಿಕಾ, ಇಸ್ರೇಲ್ ಗೆ ಸೇರಿದ ನಾಗರಿಕರನ್ನೂ ರಕ್ಷಿಸಲಾಗಿತ್ತು. ಕೇಂದ್ರ ವಿದೇಶಾಂಗ ಸಹಾಯಕ ಸಚಿವ ಜ. ವಿ. ಕೆ. ಸಿಂಗ್ರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯು ರಾಷ್ಟ್ರೀಯವಾಗಿ ಹಾಗೂ ಅಂತಾರಾಷ್ಟ್ರೀಯವಾಗಿ ಪ್ರಶಂಸೆಗೆ ಒಳಗಾಗಿತ್ತು. ಇರಾಕ್ನ ಐ ಎಸ್ ಐ ಎಸ್ ನ ಕಪಿಮುಷ್ಠಿಯೊಳಗೆ ಸಿಕ್ಕಿ ಹಾಕಿಕೊಂಡಿದ್ದ ಕೇರಳ ಮೂಲದ 44 ನರ್ಸ್ಗಳನ್ನು ರಕ್ಷಿಸಿದ್ದು, ಯೆಮನ್ನಲ್ಲಿ ಐಎಸ್ ಐ ಎಸ್ ನಿಂದ ಅಪಹರಿಸಲ್ಪಟ್ಟು ಒತ್ತೆ ಇಡಲ್ಪಟ್ಟಿದ್ದ ಭಾರತದ ಕ್ರಿಶ್ಚಿಯನ್ ಪಾದ್ರಿ ಫಾ. ಟಾಮ್ ಉಜುನ್ನಲ್ಲಿಲ್ರನ್ನು ಐಎಸ್ ಐ ಎಸ್ ಕಬಂಧ ಹಸ್ತದಿಂದ ಮುಕ್ತಿಗೊಳಿಸಿದ್ದು ಮುಂತಾದವುಗಳು ಭಾರತದ ವಿದೇಶಾಂಗ ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಮೋದಿಯವರು ತಮ್ಮ ವಿದೇಶಯಾತ್ರೆಯ ಸಂದರ್ಭಗಳಲ್ಲಿ ಭೇಟಿ ಕೊಟ್ಟ ದೇಶಗಳಲ್ಲಿ ಯಾವುದೋ ರೀತಿಯ ಅಪರಾಧ ಎಸಗಿ ಶಿಕ್ಷೆಗೆ ಒಳಗಾಗಿರುವ ಭಾರತೀಯ ಅಪರಾಧಿಗಳ ಶಿಕ್ಷೆಯ ತೀವ್ರತೆ ಹಾಗೂ ಅವಧಿಯನ್ನು ಕಡಿತಗೊಳಿಸಲು ಆ ದೇಶದ ಮುಖ್ಯಸ್ಥರ ಜೊತೆಗೆ ಮಾತನಾಡಿ ಶ್ರಮಿಸುತ್ತಾರೆ.
ವಿದೇಶಾಂಗ ಸಚಿವರಾದ ಸುಶ್ಮಾ ಸ್ವರಾಜ್ರವರು ವಿದೇಶಗಳಲ್ಲಿರುವ ಭಾರತೀಯರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಎತ್ತಿದ ಕೈ. ವೀಸಾದ ವಿಚಾರವಾಗಲಿ, ಕ್ಷಿಪ್ರವಾಗಿ ಪಾಸ್ಪೋರ್ಟ್ ಕೊಡಿಸುವ ವಿಷಯವಾಗಲಿ, ಅನಾರೋಗ್ಯಕ್ಕೆ ಸಿಲುಕಿದ ಸಂದರ್ಭವಾಗಲಿ, ಯಾವುದೇ ರೀತಿಯ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ ಭಾರತೀಯರು ಕೇವಲ ಟ್ವಿಟ್ಟರ್ ಮೂಲಕ ಸಂದೇಶ ಕಳುಹಿಸಿದರೂ ಅದಕ್ಕೆ ಸುಶ್ಮಾ ಸ್ವರಾಜ್ ಸ್ಪಂದಿಸಿದ ನೂರಾರು ನಿದರ್ಶನಗಳಿವೆ. ಸೌದಿ ಅರೇಬಿಯಾ, ದುಬೈ, ಅಬುದಾಬಿ ಮುಂತಾದ ಗಲ್ಫ್ ರಾಷ್ಟ್ರಗಳಲ್ಲಿ ವೀಸಾ ಹಾಗೂ ಕೆಲಸದ ವಿಚಾರಗಳಲ್ಲಿ ವಂಚನೆಗೊಳಗಾದವರನ್ನು, ಕೆಲಸ ಕಳೆದುಕೊಂಡವರನ್ನು ಕೂಡಲೇ ಭಾರತಕ್ಕೆ ಉಚಿತವಾಗಿ ಕರೆದುಕೊಂಡು ಬರುವ ಕೆಲಸವನ್ನು ರಾಯಭಾರ ಕಛೇರಿಯು ಮಾಡುತ್ತಿದೆ. ವಿದೇಶಗಳಲ್ಲಿ ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಬಿದ್ದಿರುವ ಭಾರತೀಯರಿಗೆ ಕಾನೂನು ನೆರವನ್ನೂ ಸರಕಾರ ಮಾಡುತ್ತಿದೆ.
ಭಾರತೀಯರು ಎಲ್ಲೇ ಇರಲಿ, ಹೇಗೆಯೇ ಇರಲಿ ಅವರ ರಕ್ಷಣೆಗೆ ಸದಾ ಸನ್ನದ್ಧವಾಗಿದೆ ಮೋದಿ ಸರಕಾರ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.