ಲಂಡನ್ : ಪಾಕಿಸ್ಥಾನದ ಹೆಣ್ಣು ಮಕ್ಕಳ ಶಿಕ್ಷಣ ಹಕ್ಕು ಹೋರಾಟಗಾರ್ತಿ ಮಲಾಲ ಯೂಸಫ್ ಝಾಯಿ ಮೇಲೆ ದಾಳಿ ನಡೆಸಿದ 10 ಮಂದಿ ಉಗ್ರರ ಪೈಕಿ 8 ಮಂದಿಯನ್ನು ಈಗಾಗಲೇ ರಹಸ್ಯವಾಗಿ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಲಾಲಾ ತಮ್ಮ 14ನೇ ವಯಸ್ಸಿನಲ್ಲಿ ತಾಲಿಬಾನಿ ಉಗ್ರರ ದಾಳಿಗೆ ಒಳಗಾಗಿದ್ದರು . ದಾಳಿಕೋರರಿಗೆ 25 ವರ್ಷಗಳ ಸೆರೆವಾಸದ ಸಜೆಯನ್ನು ನೀಡಲಾಗಿತ್ತು. ಆದರೆ ಶಿಕ್ಷೆಯನ್ನು ಅನುಭವಿಸುತ್ತಿರುವವರು ಎರಡೇ ಮಂದಿ. ಉಳಿದ 8 ಮಂದಿಯನ್ನು ಬಂಧಿಸಿದ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಾಗಿದೆ. ಉಗ್ರರನ್ನು ಕಳೆದ ಸೆಪ್ಟಂಬರ್ನಲ್ಲಿ ಬಂಧಿಸಲಾಗಿತ್ತು.
ತಾನು ಉಗ್ರರನ್ನು ಬೆಳೆಯಲು ಬಿಡುವುದಿಲ್ಲ. ಸದೆ ಬಡಿಯುತ್ತೇವೆ ಎನ್ನುವ ಪಾಕಿಸ್ಥಾನ, ಹೋರಾಟಗಾರ್ತಿ ಮಲಾಲ ಯೂಸಫ್ ಝಾಯಿ ಮೇಲೆ ದಾಳಿ ಮಾಡಿದವರ ಬಿಡುಗಡೆಗೆ ಸಹಕರಿಸಿದ್ದು, ಆ ದೇಶ ಉಗ್ರರ ಬಗ್ಗೆ ತಳೆದಿರುವ ಧೋರಣೆಯನ್ನು ಸ್ಪಷ್ಟಪಡಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.