ಬೆಳ್ತಂಗಡಿ : ಮುಂಗಾರು ಮಳೆಯ ವಿಳಂಬದ ಬಗೆಗಿನ ವರದಿಗಳ ನಡುವೆಯೆ ಗುರುವಾರ ಮಧ್ಯಾಹ್ನದಿಂದಲೇ ಬೆಳ್ತಂಗಡಿ ತಾಲೂಕಿನಾದ್ಯಾಂತ ಗುಡುಗು ಸಹಿತ ಮಳೆ ಸುರಿದಿದ್ದು ಬಿಸಿಲ ಬೇಗೆಯನ್ನು ಕಡಿಮೆ ಗೊಳಿಸಿದೆ.
ನೆರಿಯ ಗ್ರಾಮದ ನುರ್ಗೆದಡಿ ನಿವಾಸಿ ಹರೀಶ್ ಗೌಡ ಅವರ ಮನೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ. ಮನೆಯ ಗೋಡೆ ಬಿರುಕು ಬಿಟ್ಟಿದ್ದು ವಯರ್ಗಳು ಸುಟ್ಟು ಹೋಗಿದೆ. ಟಿವಿ ಸೇರಿದಂತೆ ಮನೆಯಲ್ಲಿದ್ದ ಬಹುತೇಕ ವಸ್ತುಗಳು ನಾಶಗೊಂಡಿದೆ.
ಇವರ ಪಕ್ಕದ ಮನೆಯ ಸುಶೀಲ ಎಂಬವರು ಸಿಡಿಲಿನ ಆಘಾತಕ್ಕೆ ಗಾಯಗೊಂಡಿದ್ದಾರೆ. ಇದೇ ಗ್ರಾಮದ ನಿವಾಸಿ ಬಾಬುಗೌಡ ಎಂಬವರ ಮನೆಯ ಮೇಲೆ ಮರ ಮುರಿದು ಬಿದ್ದು ಮನೆಗೆ ಭಾಗಶ ಹಾನಿ ಸಂಭವಿಸಿದೆ.
ಕುಡುಮಡ್ಕ ಪ್ರದೇಶದ ಕೊರಗಪ್ಪ ಗೌಡ, ವೀರಪ್ಪ ಗೌಡ, ದೇವಪ್ಪಗೌಡ, ಮಾಧವ ಗೌಡ, ಸೆಬಾಸ್ಟಿನ್, ಜಾನ್ಸನ್, ವಾಸು ಗೌಡ ಎಂಬವರ ರಬ್ಬರ್ ಹಾಗು ಅಡಿಕೆ ತೋಟಗಳಿಗೆ ಗಾಳಿಯಿಂದ ಹಾನಿ ಸಂಬವಿಸಿದೆ.
ಚಾರ್ಮಾಡಿ ಗ್ರಾ. ಪಂ. ವ್ಯಾಪ್ತಿಯ ಚಿಬಿದ್ರೆಯಲ್ಲಿ ಪೌಲೋಸ್ ಎಂಬವರ ಮನೆ ಹಾಗೂ ತೋಟಕ್ಕೆ ಹಾನಿಯಾಗಿದೆ. ಪುದುವೆಟ್ಟು ಹಾಗು ಧರ್ಮಸ್ಧಳ ಗ್ರಾಮಗಳಲ್ಲಿಯು ಗಾಳಿ ಮಳೆಗೆ ಹಾನಿ ಸಂಬವಿಸಿದ ಬಗ್ಗೆ ವರದಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.