ನವದೆಹಲಿ: ಕಾಶ್ಮೀರ ಕಣಿವೆಯನ್ನು ಎಲ್ಲಾ ಹವಮಾನದಲ್ಲೂ ಲಡಾಖ್ನೊಂದಿಗೆ ಸಂಪರ್ಕಿಸುವ ಝೋಜಿ ಲಾ ಸುರಂಗ ಮಾರ್ಗದ ನಿರ್ಮಾಣ ಕಾರ್ಯ ಇದೇ ಮೇ19ರಿಂದ ಆರಂಭವಾಗಲಿದೆ.
ರೂ.6,809 ಕೋಟಿ ಮೊತ್ತದ 14.2ಕಿಮೀ ಉದ್ದದ ಈ ಸುರಂಗ ಮಾರ್ಗದ ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮೇ19ರಂದು ಚಾಲನೆ ನೀಡಲಿದ್ದು, 2026ಕ್ಕೆ ಇದು ಪೂರ್ಣಗೊಳ್ಳಲಿದೆ.
ಈ ಸುರಂಗ ಮಾರ್ಗ ಕಾಶ್ಮೀರ ಜನತೆಗೆ ಎಲ್ಲಾ ಹವಮಾನದಲ್ಲೂ ಲಡಾಖ್ನ ಸಂಪರ್ಕವನ್ನು ನೀಡಲಿದೆ. 1997ರಲ್ಲೇ ಭಾರತೀಯ ಸೇನೆ ಇದರ ಸಮೀಕ್ಷೆಯನ್ನು ಆರಂಭಿಸಿತ್ತು, 1999ರ ಕಾರ್ಗಿಲ್ ಯುದ್ಧದ ಬಳಿಕ ಇದರ ಯೋಜನೆ ಆರಂಭವಾಗಿತ್ತು. 2018ರಲ್ಲಿ ಕಾಮಗಾರಿಗೆ ಚಾಲನೆ ದೊರಕುತ್ತಿದೆ.
ಝಡ್-ಮೊರ್ಹ್ನಲ್ಲಿನ ಮತ್ತೊಂದು ಮಹತ್ವದ 6.5 ಕಿಮೀ ಸುರಂಗ ಮಾರ್ಗ ಮುಂದಿನ ವರ್ಷ ಆರಂಭವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.