ಕಠ್ಮಂಡು: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನೇಪಾಳಕ್ಕೆ ಬಂದಿಳಿದಿದ್ದು, ಅಲ್ಲಿನ ಜನಕಪುರದ ಪ್ರಸಿದ್ಧ ರಾಮ ಜಾನಕಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ಮತ್ತು ಅವರ ಉನ್ನತ ಅಧಿಕಾರಿಗಳು ದೇಗುಲದ ದ್ವಾರದ ಬಳಿಕ ಮೋದಿಯವರನ್ನು ಬರಮಾಡಿಕೊಂಡರು. ಸ್ಥಳಿಯ ಜನರು ಕೂಡ ದೇಗುಲದ ದ್ವಾರದ ಬಳಿ ನಿಂತು ಸ್ವಾಗತ ಕೋರಿದರು.
ಬಳಿಕ ಮೋದಿ ದೇಗುಲದೊಳಗೆ ಪ್ರವೇಶಿಸಿ ರಾಮ, ಜಾನಕಿದೇವಿ ಮತ್ತು ಶಾಲಿಗ್ರಾಮ ದರ್ಶನವನ್ನು ಪಡೆದರು. ದೇಗುಲದ ಕಲಾವಿದರೊಂದಿಗೆ ಭಕ್ತಿ ಗೀತೆಯನ್ನೂ ಹಾಡಿದರು. ದೇಗುಲದ ವತಿಯಿಂದ ಮೋದಿಗೆ ಸನ್ಮಾನವನ್ನೂ ಮಾಡಲಾಯಿತು. ದೇಗುಲದ ಚಿತ್ರವುಳ್ಳ ಉಡುಗೊರೆ ನೀಡಲಾಯಿತು.
ಮೋದಿ ಆಗಮನದ ಹಿನ್ನಲೆಯಲ್ಲಿ ಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು, ದೇಗುಲದ ಹೊರಗೆ ನೇಪಾಳ-ಭಾರತದ ಧ್ವಜವನ್ನು ಹಾಕಲಾಗಿದೆ.
ಜನಕಪುರದ ಬರ್ಬಾಗಪುರದಲ್ಲಿ ಅವರು ಸಾರ್ವಜನಿಕ ಸಮಾವೇಶವನ್ನೂ ಉದ್ದೇಶಿಸಿ ಮಾತನಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.