ಪ್ರತಿ ಚುನಾವಣೆಯಲ್ಲೂ ಕರ್ನಾಟಕದಲ್ಲಿ ನಡೆಯುವ ತ್ರಿಕೋನ ಸ್ಪರ್ಧೆ ರಾಜಕೀಯಕ್ಕೆ ಕೆಲವೊಂದು ಆಸಕ್ತಿಕರ ತಿರುವುಗಳನ್ನು ನೀಡುತ್ತದೆ. ಕಳೆದ ಎರಡೂ ವಿಧಾನಸಭೆ ಚುನಾವಣೆಯಲ್ಲೂ ವಿನ್ನರ್ಸ್ ಮತ್ತು ರನ್ನರ್ ಅಪ್ಗಳ ನಡುವಿನ ಅಂತರ ಶೇ.2ಕ್ಕಿಂತಲೂ ಕಡಿಮೆಯಿದೆ. ಅಷ್ಟೇ ಅಲ್ಲದೇ 2004ರಿಂದಲೂ ಪ್ರಮುಖ ಪಕ್ಷಗಳ ಶೇಕಡಾವಾರು ಮತಗಳು ಕೂಡ ಸ್ಥಿರವಾಗಿಯೇ ಇವೆ (ಒಂದು ವೇಳೆ ನಾವು 2013ರ ಫಲಿತಾಂಶ ಪರಿಗಣಿಸದೇ ಇದ್ದರೆ, ಈ ವೇಳೆ ಬಿಜೆಪಿಯ ಸಾಂಪ್ರದಾಯಿಕ ಮತಗಳು ಬಿಜೆಪಿ ಮತ್ತು ಕೆಜೆಪಿ ನಡುವೆ ಹಂಚಿಹೋಗಿದ್ದವು)
ಮುಂಬಯಿ ಪ್ರಾಂತ್ಯ, ಮೈಸೂರು ಪ್ರಾಂತ್ಯ, ಹೈದರಾಬಾದ್ ಪ್ರಾಂತ್ಯದ ಕೆಲವು ಭಾಗ, ಕರಾವಳಿ ಪ್ರದೇಶಗಳನ್ನು ವಿಲೀನಗೊಳಿಸುವ ಮೂಲಕ ಕರ್ನಾಟಕ ಅಸ್ತಿತ್ವಕ್ಕೆ ಬಂತು. ಈ ಪ್ರದೇಶಗಳು ಈಗಲೂ ಉಪ-ಪ್ರದೇಶಗಳಂತೆಯೇ ವರ್ತಿಸುತ್ತಿದ್ದು, ವಿಭಿನ್ನ ರಾಜಕೀಯ ಟ್ರೆಂಡ್ಗಳನ್ನು ತೋರಿಸುತ್ತವೆ. ಮೈಸೂರು ಭಾಗದಲ್ಲಿನ ಒಕ್ಕಲಿಗರ ಪ್ರಾಬಲ್ಯ, ರಾಜ್ಯಾದ್ಯಂತ ಇರುವ ಲಿಂಗಾಯತರ ಪ್ರಾಬಲ್ಯ, ಎಸ್ಸಿ/ಎಸ್ಟಿ ಪ್ರದೇಶಗಳ ಪ್ರಾಬಲ್ಯ ರಾಜ್ಯದ ಚುನಾವಣಾ ಹೋರಾಟವನ್ನು ನಿರ್ಧರಿಸುತ್ತವೆ.
2008ರ ಚುನಾವಣೆ ಕರ್ನಾಟಕದಲ್ಲಿ ಬಿಜೆಪಿಯ ಉದಯವನ್ನು ಕಂಡಿತು, ಆದರೆ ನಂತರದ ರಾಜಕೀಯ ಬೆಳವಣಿಗೆಗಳು ಬಿಜೆಪಿಯನ್ನು ಕೆಳಗಿಳಿಯುವಂತೆ ಮಾಡಿತು. ಪ್ರಸ್ತುತ ತನ್ನ ಸ್ಥಾನವನ್ನು ಮತ್ತೆ ಕ್ರೋಢೀಕರಿಸುವುದು ಬಿಜೆಪಿ ಮುಂದಿರುವ ಅತೀದೊಡ್ಡ ಸವಾಲು. ಕೆಜೆಪಿಯನ್ನು, ಬಿಎಸ್ಆರ್ಸಿಪಿಯನ್ನು ಮತ್ತೆ ತನ್ನಲ್ಲಿ ವಿಲೀನಗೊಳಿಸುವ ಮೂಲಕ, ಅದರ ಶಾಸಕರನ್ನು ತನ್ನತ್ತ ಕರೆ ತರುವ ಮೂಲಕ ಬಿಜೆಪಿ ಈಗಾಗಲೇ ಈ ಕಾರ್ಯವನ್ನು ಯಶಸ್ವಿಯಾಗಿ ಮಾಡಿದೆ. ಬಿಎಸ್ಆರ್ಸಿಪಿ ಪಕ್ಷದ ಪ್ರಭಾವಿ ನಾಯಕರಾಗಿದ್ದ ಬಿ.ಶ್ರೀರಾಮುಲು ಈಗ ರಾಜ್ಯದ ಪಾರಂಪರಿಕ ನಗರ ಬದಾಮಿಯಲ್ಲಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ನೇರ ಹಣಾಹಣಿಗೆ ಇಳಿದಿದ್ದಾರೆ, ಈ ಮೂಲಕ ಬದಾಮಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಎಲ್ಲಕ್ಕೂ ಹೆಚ್ಚಾಗಿ ಸ್ಥಳಿಯ ನಾಯಕರು ಬಿಜೆಪಿಯತ್ತ ಹೊರಳುತ್ತಿರುವುದು ಕೂಡ ಈ ಬಾರಿ ವೋಟ್ ಶಿಫ್ಟ್ಗೆ ಕಾರಣವಾಗುತ್ತಿದೆ. ಉದಾಹರಣೆಗೆ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಅಭೂತಪೂರ್ವ ವಿಜಯವನ್ನು ಸಾಧಿಸಿದವರು, ಈ ಬಾರಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಕಳೆದ ಬಾರಿ ತುಸು ಅಂತರದಿಂದ ಕಾಂಗ್ರೆಸ್ ವಿರುದ್ಧ ಸೋತಿದ್ದ ಕೆ.ಜೈಪಾಲ್ ರೆಡ್ಡಿ ಈ ಬಾರಿ ಗೌರಿಬಿದನೂರಿನ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಕೆಲವು ಪಕ್ಷಗಳು ತಮ್ಮ ಮುಂದಿದ್ದ ಕಗ್ಗಂಟುಗಳನ್ನು ನಿವಾರಣೆ ಮಾಡಿದ್ದರೂ ಕೂಡ, ರಾಜ್ಯದಲ್ಲಿ ಅತಂತ್ರ ವಿಧಾಸಭೆ ರಚನೆಯಾಗುವ ಸಾಧ್ಯತೆ ಹೆಚ್ಚಾಗಿ ಗೋಚರಿಸುತ್ತಿದೆ. ಅತಂತ್ರ ಪರಿಸ್ಥಿತಿ ನಿರ್ಮಾಣವಾಗದಂತೆ ಮಾಡಬೇಕಾದರೆ ಪಕ್ಷಗಳು ಒಂದಿಷ್ಟು ಶೇಕಡಾ ಮತಗಳನ್ನು ತಮ್ಮ ಪರವಾಗಿ ತಿರುಗುವಂತೆ ಮಾಡಬೇಕಾಗಿರುವುದು ಅನಿವಾರ್ಯ. ಆದರೆ ಯಾವ ಪಕ್ಷ ಈ ಕಾರ್ಯದಲ್ಲ್ಲಿ ಯಶಸ್ವಿಯಾಗಬಹುದು? ಎಂಬುದು ದೊಡ್ಡ ಪ್ರಶ್ನೆ.
ಕಳೆದ ಒಂದು ದಶಕದಲ್ಲಿ ರಾಜ್ಯದ ಮಾಧ್ಯಮಗಳ ಸ್ವರೂಪದಲ್ಲೂ ಕೂಡ ಸಾಕಷ್ಟು ಬದಲಾವಣೆಗಳಾಗಿವೆ. ಮಾಧ್ಯಮ ದಿಗ್ಗಜರು ಕೇವಲ ಮಾಹಿತಿದಾರರಾಗಿಯೇ ಉಳಿದಿಲ್ಲ. ಜನರು ಕೂಡ ತಮಗೆ ಬೇಕಾದ ಮಾಹಿತಿಗಳನ್ನು ಸಂಗ್ರಹಿಸಲು ಸಮರ್ಥರಾಗಿದ್ದಾರೆ ಮತ್ತು ಮಾಹಿತಿಯನ್ನು ಅವರೇ ಪ್ರಕ್ರಿಯೆಗೊಳಿಸುತ್ತಾರೆ ಕೂಡ. ನಮ್ಮ ’ಇಂಟರ್ಯಾಕ್ಟೀವ್ ಮ್ಯಾಪ್’ಗೆ ನಾಳೆ ಭೇಟಿ ನೀಡಿ, ನಿಮ್ಮದೇ ಆದ ಭವಿಷ್ಯ ನುಡಿಯಿರಿ. ಭವಿಷ್ಯದ ಮಾಧ್ಯಮದ ಭಾಗವಾಗಿ. ಚುನಾವಣೆ ಬಗ್ಗೆ ನೀವೇ ಕ್ರೋಢೀಕರಿಸಿದ ನಿಮ್ಮ ಸ್ವ ಅಭಿಪ್ರಾಯಗಳನ್ನು, ಊಹೆಗಳನ್ನು ಹಂಚಿಕೊಳ್ಳಿ.
Research Partner : Bharati Web Pvt. Ltd.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.