ನವದೆಹಲಿ: ಗುಣಮಟ್ಟದ ಆಹಾರಗಳನ್ನು ಪ್ರಯಾಣಿಕರಿಗೆ ಉಣಬಡಿಸುವ ಸಲುವಾಗಿ ಭಾರತೀಯ ರೈಲ್ವೇಯು ಅತ್ಯಾಧುನಿಕ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನಗಳನ್ನು ಬಳಸುತ್ತಿದೆ.
ತನ್ನ 16 ಮೂಲ ಕಿಚನ್ಗಳಲ್ಲಿ ಹೈ ಡೆಫಿನೇಶನ್ ಸಿಸಿಟಿವಿಗಳನ್ನು ಅಳವಡಿಸಿದೆ. ಇದರಿಂದ ಅಕ್ರಮಗಳನ್ನು ತಡೆಯುವುದು ಸಾಧ್ಯವಾಗಲಿದೆ. ಅಲ್ಲದೇ ವೊಬೊಟ್ ಎಂಬ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಸಿಸ್ಟಮ್ ಮೂಲಕ ಕೇಟರಿಂಗ್ ಕಾರ್ಯಾಚರಣೆಯನ್ನು ಟ್ರ್ಯಾಕ್ ಮಾಡುತ್ತಿದೆ.
ಕುಕ್ಕಿಂಗ್, ಪ್ಯಾಕೇಜಿಂಗ್ಗಳ ವೇಳೆ ಅವವ್ಯಹಾರಗಳು ನಡೆದು ಆಹಾರದ ಗುಣಮಟ್ಟಕ್ಕೆ ಹೊಡೆತ ಬೀಳುವ ಸಂಭವವಿದೆ. ಹೀಗಾಗಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಅವ್ಯಹಾರಗಳಿಗೆ ತಡೆಯೊಡ್ಡಲಾಗುತ್ತಿದೆ. ವೊಬೊಟ್ ಎಂಬ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಸಿಸ್ಟಮ್ ಬಳಸಿ ಕ್ಯಾಟರಿಂಗ್ ಕಾರ್ಯಾಚರಣೆಯನ್ನು ಟ್ರ್ಯಾಕ್ ಮಾಡಲಾಗುತ್ತಿದೆ.
ದೆಹಲಿಯಲ್ಲಿನ ಐಆರ್ಸಿಟಿಸಿಯು ಇಂಟೆಲಿಜೆಂಟ್ ಕಿಚನ್ ಕಂಟ್ರೋಲ್ ರೂಮ್ ಸ್ಥಾಪನೆ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.