ಶಿಲ್ಲಾಂಗ್: ಶಿಲ್ಲಾಂಗ್ ಜಿಲ್ಲಾ ಜೈಲಿಗೆ ’ಇ-ಪ್ರಿಸನ್’ ಸಾಫ್ಟ್ವೇರ್ನ್ನು ಅಳವಡಿಸುವ ಮೂಲಕ ಮೇಘಾಲಯ ಈ ಕ್ರಮ ಅಳವಡಿಸಿಕೊಂಡ ಈಶನ್ಯ ಭಾಗದ ಮೊದಲ ರಾಜ್ಯವಾಗಿ ಹೊರಹೊಮ್ಮಿದೆ.
ಜೈಲಿನೊಳಗಿನ ಕಾರ್ಯಕ್ಷಮತೆಯನ್ನು ಉತ್ತೇಜಿಸುವ ಮತ್ತು ಪರಿಣಾಮಕಾರಿ ಕ್ರಮ ಅಳವಡಿಸುವ ಸಲುವಾಗಿ ‘ಇ-ಪ್ರಿಸನ್ ಸಾಫ್ಟ್ವೇರ್’ ಅಳವಡಿಸಲಾಗಿದೆ ಎಂದು ಅಲ್ಲಿನ ಗೃಹ ಸಚಿವ ಜೇಮ್ಸ್ ಸಂಗಮ್ ಹೇಳಿದ್ದಾರೆ.
ಈ ಸಾಫ್ಟ್ವೇರ್ನಲ್ಲಿ ಎಲ್ಲಾ ಕೈದಿಗಳ ಮಾಹಿತಿ ಶೇಖರಣೆಯಾಗಲಿದ್ದು, ಕಾರ್ಯದಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತಂದು ಕೊಡಲಿದೆ, ರಾಜ್ಯದ ಇತರ ೪ ಜೈಲುಗಳ್ಳಲ್ಲೂ ಇದನ್ನು ಅಳವಡಿಸಿಕೊಳ್ಳುತ್ತೇವೆ ಎಂದಿದ್ದಾರೆ.
ಈ ಸಾಫ್ಟ್ವೇರ್ನ್ನು ಕೇಂದ್ರ ಅಭಿವೃದ್ಧಿಪಡಿಸಿದ್ದು, ಮೊದಲ ಬಾರಿಗೆ ತಿಹಾರ್ ಜೈಲಿನಲ್ಲಿ ಯಶಸ್ವಿಯಾಗಿ ಅಳವಡಿಸಿಕೊಳ್ಲಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.