ನವದೆಹಲಿ: ವಿಶ್ವದ ಮೊತ್ತ ಮೊದಲ ‘ಮಹಿಳಾ ವಿಶೇಷ ರೈಲು’ ಭಾರತದಲ್ಲಿ ಆರಂಭಗೊಂಡು ಇಂದಿಗೆ 26 ವರ್ಷಗಳು ಪೂರೈಸಿದೆ. ಪಶ್ಚಿಮ ರೈಲ್ವೇಯ ಚರ್ಚ್ಗೇಟ್ನಿಂದ ಬೊರಿವಲಿ ಸ್ಟೇಶನ್ವರೆಗೆ ಈ ರೈಲು ಸಾಗುತ್ತದೆ.
1992ರ ಮೇ 5ರಂದು ಪಶ್ಚಿಮ ರೈಲ್ವೇಯು ಕೇವಲ ಮಹಿಳೆಯರಿಗಾಗಿ ಸಬ್ಅರ್ಬನ್ ರೈಲು ಸೇವೆಯನ್ನು ಆರಂಭಿಸಿತ್ತು. ಮೊದಲು ಕೇವಲ ದಿನಕ್ಕೆ ಎರಡು ಬಾರಿ ಈ ರೈಲು ಪ್ರಯಾಣಿಸುತ್ತಿತ್ತು. ಪ್ರಸ್ತುತ ಇದು ದಿನಕ್ಕೆ ೮ ಬಾರಿ ಓಡಾಟ ನಡೆಸುತ್ತಿದೆ.
’ಇಡೀ ರೈಲನ್ನು ಮಹಿಳೆಯರಿಗಾಗಿ ಅರ್ಪಿಸಿದ್ದು ಒಂದು ಇತಿಹಾಸವೇ ಆಗಿದೆ, ಈ ಮೂಲಕ ಪಶ್ಚಿಮ ರೈಲ್ವೇ ಇತರ ರೈಲ್ವೇಗಳಿಗೂ ಮಾದರಿಯಾಗಿದೆ’ ಎಂದು ಪಶ್ಚಿಮ ರೈಲ್ವೇ ವಕ್ತಾರ ರವೀಂದ್ರ ಭಕರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.