https://chat.whatsapp.com/BKucwX3HbX4J90X4VL22yG
News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
×
Home About Us Advertise With s Contact Us

ಕರ್ನಾಟಕದ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ಹಾಕಿ: ಮೋದಿ

ಕಲಬುರ್ಗಿ: ಚುನಾವಣೆ ಬರುತ್ತದೆ ಹೋಗುತ್ತದೆ, ಆರೋಪ, ಪ್ರತ್ಯಾರೋಪ ಇರುತ್ತದೆ ಹೋಗುತ್ತದೆ, ಆದರೆ ಇಂತಹ ಜನಸಾಗರ, ಸರ್ಕಾರ ಬದಲಿಸುವ ಇಂತಹ ಹುಮ್ಮಸ್ಸು ಈಗ ಮಾತ್ರ ಕರ್ನಾಟಕದ ನಾಲ್ಕು ದಿಕ್ಕುಗಳಲ್ಲಿ ಕಾಣುತ್ತಿದೆ ಎಂದರು.

ಇಂದು ದೇಶದಲ್ಲಿ ಕಾಂಗ್ರೆಸ್‌ಗೆ ಸೋಲು ಆಗುತ್ತಿದೆ, ಕಳೆದ 4 ವರ್ಷದಲ್ಲಿ ದೇಶದ ಮೂಲೆ ಮೂಲೆಯಲ್ಲೂ ಕಾಂಗ್ರೆಸ್ ಕ್ಷಕ್ಕೆ ಜನ ಸೋಲಿನ ರುಚಿ ತೋರಿಸಿದ್ದಾರೆ. ಸ್ವಾತಂತ್ರ್ಯದ ದೇಶವ್ಯಾಪಿ ಜನರಿಗೆ ಬಿಜೆಪಿಯಲ್ಲಿ ಹೊಸ ಆಶಾಕಿರಣ ಮೂಡಿದೆ ಎಂದರು.

ಈ ಚುನಾವಣೆ ಸೋಲು ಗೆಲುವಿನ, ಸರ್ಕಾರ ರಚನೆಂiಂತಹ ಚಿಕ್ಕ ವಿಷಯದ ಚುನಾವಣೆಯಲ್ಲ. ಈ ಚುನಾವಣೆ ಕರ್ನಾಟಕದ ಯುಕವಕರ ಭವಿಷ್ಯ, ರೈತರ ಭಾಗ್ಯ ಬದಲಾಯಿಸುವ, ಮಹಿಳೆಯರಿಗೆ ಗೌರವ ತಂದುಕೊಡುವ ಚುನಾವಣೆಯಾಗಿದೆ ಎಂದರು.

ಮೇ.12ರಂದು ಮತದಾನ ಮಾಡುವಾಗ ಕೇವಲ ಕರ್ನಾಟಕದ ಉಜ್ವಲ ಭವಿಷ್ಯವನ್ನು ಗಮನದಲ್ಲಿಟ್ಟುಕೊಮಡು ಬಟನ್ ಒತ್ತಿ. ಮೋದಿ ಸರ್ಕಾರ ಕನಾಟಕದ ಬಿಜೆಪಿ ಸರ್ಕಾರದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತದೆ ಎಂದು ನಾನು ಭರವಸೆ ನೀಡುತ್ತೇನೆ ಎಂದರು.

ಈ ದೇಶದ ಎಕತೆ, ಅಖಂಡತೆಗಾಗಿ ಜೀವನ ಸಾಗಿಸಿದ ಸರ್ದಾರ್ ಪಟೇಲ್‌ಗೆ ಕಲ್ಬುರ್ಗಿಯೊಂದಿಗೆ ವಿಶೇಷ ಸಂಬಂಧವಿತ್ತು. ನಜಾಮರ ವಿರೋಧವನ್ನು ಮೆಟ್ಟಿ ನಿಂತು ಅವರು ಕಲ್ಬುರ್ಗಿಯನ್ನು ಭಾರತದ ಭಾಗವಾಗಿಸಿದರು ಎಂದರು.

ಕಾಂಗ್ರೆಸ್‌ನ ಸರ್ವೋಚ್ಛ ನಾಯಕ ವಂದೇ ಮಾತರಂಗೆ ಅವಮಾನ ಮಾಡಿದ್ದಾರೆ. ಇಂತಹವರಿಂದ ದೇಶದ ಬಗ್ಗೆ ಸಕಾರಾತ್ಮಕ ಚಿಂತನೆಯನ್ನು ನಿರೀಕ್ಷಿಸುವುದು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಭಾರತೀಯ ಸೇನೆ, ಕರ್ನಾಟಕಕ್ಕೆ ಅವಿನಾಭಾವ ಸಂಬಂಧವಿದೆ. ಇಂದು ವಿಶ್ವದಲ್ಲೇ ನಮ್ಮ ಸೈನಿಕರಿಗೆ ಗೌರವವಿದೆ. ಆದರೆ ಕಾಂಗ್ರೆಸ್ ಸೈನಿಕರಿಗೆ ಅವಮಾನ ಮಾಡಿದೆ ಎಂಬುದನ್ನು ನವ ಯುವಕರು ಮರೆಯಬಾರದು. ಸೈನಿಕರನ್ನು ಕಾಂಗ್ರೆಸ್ ಮುಖಂಡರೊಬ್ಬರು ಗೂಂಡಾ ಎಂದು ಕರೆದಿದ್ದಾರೆ. ವೀರ ಸೈನಿಕರನ್ನು ಗೂಂಡಾ ಎನ್ನುವ ಪಾಪ ಮಾಡಲು ಯಾರಾದರು ಸಾಧ್ಯವೇ? ಆದರೆ ಈ ರೀತಿ ಕರೆದವರನ್ನು ಕಾಂಗ್ರೆಸ್ ಉಚ್ಚಾಟನೆಗೊಳಿಸಿಲ್ಲ, ಅವರಿಂದ ಕ್ಷಮೆಯಾಚನೆ ಮಾಡಿಸಲಿಲ್ಲ ಎಂದರು.

ಜೈ ಜವಾನ್, ಜೈ ಕಿಸಾನ್ ಭಾರತದ ರೈತರು, ಯೋಧರಿಗೆ ಗೌರವ ನೀಡುತ್ತದೆ. ಇದು ತೊಗರಿ ಬೆಳೆಯುವ ಕ್ಷೇತ್ರ. ಕಲ್ಬುರ್ಗಿ ತೊಗರಿಯ ಕಣಜ ಎಂದು ಕರೆಯಲಾಗುತ್ತದೆ. ಕರ್ನಾಟಕದ ಅರ್ಧ ತೊಗರಿ ಕಲ್ಬಗುರ್ಗಿಯಿಂದಲೇ ಬರುತ್ತದೆ. ಈ ಬಾರಿ ದಾಖಲೆಯ ತೊಗರಿ ಬೆಳೆಯಲಾಗಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರ ಬಗ್ಗೆ ಸಂವೇದನಾ ರಹಿತವಾಗಿದೆ. ಬೆಂಬಲ ಬೆಲೆ ನೀಡುತ್ತಿಲ್ಲ ಎಂದರು.

ಸ್ವಾಮಿನಾಥನ್ ಕಮಿಷನ್ ವರದಿಯನ್ನು ಕಪಾಟುನಲ್ಲಿಟ್ಟಿತ್ತು ಕಾಂಗ್ರೆಸ್ ಸರ್ಕಾರ, ಆದರೆ ಅದನ್ನು ನಾವು ಅನುಷ್ಠಾನಕ್ಕೆ ತಂದಿದ್ದೇವೆ. ಇದನ್ನು ಕಾಂಗ್ರೆಸ್ ಒಪ್ಪಿಕೊಳ್ಳಲೇ ಬೇಕಲ್ಲವೇ ಎಂದರು.

ಎಲ್ಲಿ ಎಲ್ಲಿ ಬಿಜೆಪಿ ಸರ್ಕಾರವಿದೆಯೋ ಅಲ್ಲಿ ಫಸಲ್ ಬಿಮಾ ಯೋಜನೆಯ ಎಲ್ಲಾ ಸೌಲಭ್ಯ ರೈತರಿಗೆ ಸಿಗುವಂತೆ ಮಾಡುವುದು ನಮ್ಮ ಆದ್ಯತೆ. ಮುಂದಿನ ದಿನಗಳಲಿ ಕರ್ನಾಟಕದಲ್ಲೂ ಇದು ಸಾಧ್ಯವಾಗಲಿದೆ ಎಂದರು.

ಕಾಂಗ್ರೆಸ್ ದಲಿತರ ಹೆಸರಲ್ಲಿ ರಾಜಕೀಯ ಮಾಡುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಹೆಸರಲ್ಲಿ ಹಿಂದೆ ಚುನಾವನೆ ಎದುರಿಸಿದರು. ಅವರನ್ನು ಸಿಎಂ ಮಾಡುತ್ತೇವೆ ಎಂದಿದ್ದರು. ಆದರೆ ಗುಪ್ತ ಮತದಾನದ ರೂಪದಲ್ಲಿ ಖರ್ಗೆ ಬದಲು ಬೇರೆಯವರನ್ನು ಸಿಎಂ ಮಾಡಿದರು. ದಲಿತರ ಬಗ್ಗೆ ಮಾತನಾಡುವ ಕಾಂಗ್ರೆಸ್‌ಗೆ ಅವರ ಬಗ್ಗೆ ಕಾಳಜಿಯಿಲ್ಲ ಎಂದರು.

ನಾವು ಎಲ್ಲೆಲ್ಲಿ ಗೆಲ್ಲುತ್ತೇವೆಯೋ ಅಲ್ಲಿ ಜನರ ವಿಶ್ವಾಸ ಗಳಿಸುತ್ತೇವೆ. ಹೀಗಾಗಿ ಕಮಲ ನಗು ಬೀರುತ್ತದೆ. ಆದರೆ ಕಾಂಗ್ರೆಸ್ ಗೆದ್ದಲ್ಲಿ ಕೇವಲ ದರ ಪರಿವಾರದ ಸಂಪತ್ತು ವೃದ್ಧಿಯಾಗುತ್ತಿದೆ ಎಂದು ಆಪಾದಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

 

Recent News

Back To Top