ಮುಂಬಯಿ: ತನ್ನ ರಾಜ್ಯದಲ್ಲಿರುವ ಇಂಗ್ಲೀಷೇತರ ಶಾಲೆಗಳಿಗಾಗಿ ಸಿಬಿಎಸ್ಇ, ಐಸಿಎಸ್ಇ ಮಾದರಿಯಲ್ಲಿ ಅಂತಾರಾಷ್ಟ್ರೀಯ ಶಿಕ್ಷಣ ಮಂಡಳಿಯನ್ನು ರಚಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.
‘ನಮ್ಮ ಸರ್ಕಾರ ’ಮಹಾರಾಷ್ಟ್ರ ಅಂತಾರಾಷ್ಟ್ರೀಯ ಶಿಕ್ಷಣ ಮಂಡಳಿ’ಯನ್ನು ರಚಿಸಲು ನಿರ್ಧರಿಸಿದ್ದು, ಈ ಮಂಡಳಿ ಇಂಗ್ಲೀಷೇತರ ಶಾಲೆಗಳಿಗೆ ಸಿಲೆಬಸ್ ಸಿದ್ಧಪಡಿಸಲಿದೆ. ಪ್ರಸ್ತುತ ಇರುವ ಸಿಬಿಎಸ್ಇ ಮತ್ತು ಐಸಿಎಸ್ಇಗಳಿಗೆ ಈ ಮಂಡಳಿ ಸ್ಪರ್ಧೆಯೊಡ್ಡಲಿದೆ’ ಎಂದು ಮಹಾರಾಷ್ಟ್ರ ಶಿಕ್ಷಣ ಸಚಿವ ವಿನೋದ್ ತಾವ್ಡೆ ಹೇಳಿದ್ದಾರೆ.
ಮೊದಲ ಹಂತದಲ್ಲಿ, ಅಂತಾರಾಷ್ಟ್ರೀಯ ಗುಣಮಟ್ಟದಂತೆ 13 ಮರಾಠಿ ಶಾಲೆಗಳನ್ನು ಹೊಸ ಸಿಲೆಬಸ್ನಡಿ ಆಯ್ಕೆ ಮಾಡಲಾಗುತ್ತದೆ. ಪ್ರತಿ ಜಿಲ್ಲೆಯ ಕನಿಷ್ಠ ಒಂದು ಶಾಲೆಯಾದರೂ ಈ ಅಂತಾರಾಷ್ಟ್ರೀಯ ಮಂಡಳಿಯಡಿ ಬರುವಂತೆ ನೊಡಿಕೊಳ್ಳುತ್ತೇವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.