ನವದೆಹಲಿ: ವಿಶ್ವವಿದ್ಯಾಲಯ ಮಟ್ಟದಲ್ಲಿ ಬೋಧನೆ ನಡೆಸುವ ಉಪನ್ಯಾಸಕರು, ಅಸಿಸ್ಟೆಂಟ್ ಪ್ರೊಫೆಸರ್ಗಳು 2021ರಿಂದ ಪಿಎಚ್ಡಿ ಪದವಿಯನ್ನು ಹೊಂದಿರುವುದು ಕಡ್ಡಾಯವಾಗಿದೆ.
ಅಲ್ಲದೇ ಬೋಧಕರಾಗಿ ಕಾರ್ಯ ಆರಂಭಿಸುವ ಮುನ್ನ ಒಂದು ತಿಂಗಳು ಕಡ್ಡಾಯವಾಗಿ ಇಂಡಕ್ಷನ್ ಪ್ರೋಗ್ರಾಂನಲ್ಲಿ ಭಾಗಿಯಾಗಬೇಕು. ಅಲ್ಲದೇ ದಿನದಲ್ಲಿ 2 ಗಂಟೆಗಳನ್ನು ವಿದ್ಯಾರ್ಥಿಗಳ ಸಮುದಾಯ ಅಭಿವೃದ್ಧಿ, ಪಠ್ಯೇತರ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ವ್ಯಯಿಸಬೇಕು.
ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಯುಜಿಸಿ ಶಿಕ್ಷಕ ಕನಿಷ್ಠ ಅರ್ಹತೆಯ ಬಗ್ಗೆ ನಿರ್ದೇಶನ ಹೊರಡಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.