ನವದೆಹಲಿ: ಶೀಘ್ರದಲ್ಲೇ ಸಿನಿಮಾ ಥಿಯೇಟರ್ಗಳಲ್ಲಿ ಸಿನಿಮಾ ಆರಂಭಕ್ಕೂ ಮುನ್ನ ಅಂಗಾಂಗ ದಾನಗಳ ಮಹತ್ವ ಸಾರುವ ಕಿರುಚಿತ್ರವನ್ನು ಪ್ರಸಾರ ಮಾಡಲಾಗುತ್ತದೆ.
ನ್ಯಾಷನಲ್ ಆರ್ಗನ್ ಆಂಡ್ ಟಿಶ್ಯು ಟ್ರಾನ್ಸ್ಪ್ಲಾಂಟ್ ಆರ್ಗನೈಝೇಶನ್(NOTTO)ಈ ಬಗೆಗಿನ ಶಿಫಾರಸ್ಸನ್ನು ಕೇಂದ್ರ ಆರೋಗ್ಯ ಸಚಿವಾಲಯದ ಅನುಮೋದನೆಗಾಗಿ ಕಳುಹಿಸಿಕೊಟ್ಟಿದೆ. ರಾಷ್ಟ್ರಗೀತೆ ಆರಂಭಕ್ಕೂ ಮುನ್ನ ಈ ಕಿರುಚಿತ್ರ ಪ್ರಸಾರಕ್ಕೆ ಅನುಮತಿಯನ್ನು ಕೋರಲಾಗಿದೆ.
ಒಂದು ನಿಮಿಷದ ಕಿರುಚಿತ್ರ ಇದಾಗಿದ್ದು, ‘ಬ್ಯಾಕು ಟು ದಿ ಫ್ಯುಚರ್’ ಎಂಬ ಶೀರ್ಷಿಕೆ ನೀಡಲಾಗಿದೆ. ಖ್ಯಾತ ನಟ ನಾಸಿರುದ್ದೀನ್ ಷಾ ಅಭಿನಯಿಸಿದ್ದಾರೆ.
ದೇಶದಲ್ಲಿ ಅಂಗಾಂಗ ದಾನದ ಜಾಗೃತಿಯನ್ನು ಮೂಡಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.