ಕೊಹಿಮಾ: ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾದ ಈಶಾನ್ಯ ಭಾಗದ ಬಂಡುಕೋರರು ರೂ.1ಲಕ್ಷದ ಬದಲು ಇನ್ನು ಮುಂದೆ ತಲಾ 4 ಲಕ್ಷ ರೂಪಾಯಿಗಳನ್ನು ಸಹಾಯ ಧನವಾಗಿ ಪಡೆದುಕೊಳ್ಳಲಿದ್ದಾರೆ. ಅಲ್ಲದೇ ಮೂರು ವರ್ಷಗಳ ಅವಧಿಗೆ ಮಾಸಿಕ ರೂ.6000ಗಳ ವೇತನ ಪಡೆಯಲಿದ್ದಾರೆ.
1998ರಲ್ಲಿ ಈಶಾನ್ಯ ಭಾಗದ ತಪ್ಪು ಹಾದಿಯಲ್ಲಿನ ಯುವಕರ ಮತ್ತು ಹಾರ್ಡ್ಕೋರ್ ಮಿಲಿಟೆಂಟ್ಗಳ ಶರಣಾಗತಿ ಮತ್ತು ಪುನವರ್ಸತಿ ನಿಯಮವನ್ನು ಜಾರಿಗೆ ತರಲಾಗಿದ್ದು, ಇದನ್ನು ಈಗ ವಿಸ್ತೃತವಾಗಿ ಪರಿಷ್ಕರಿಸಲಾಗಿದೆ.
ಪರಿಸ್ಕೃತ ನಿಯಮದಂತೆ ರೂ.1ಲಕ್ಷದ ಬದಲು ರೂ.4ಲಕ್ಷದ ಸಹಾಯಧನ ಪಡೆಯಲಿದ್ದಾರೆ. ಅಲ್ಲದೇ ಮೂರು ವರ್ಷಗಳ ಅವಧಿಗೆ ಮಾಸಿಕ ವೇತನ ರೂ.3,500 ಬದಲು ರೂ.6,000 ಪಡೆಯಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.