ನವದೆಹಲಿ: ಮಾಧ್ಯಮದವರು ಮೈಕ್ ಹಿಡಿದ ತಕ್ಷಣ ಬಡ ಬಡ ಎಂದು ಮಾತನಾಡಿ ಆವಾಂತರ ಸೃಷ್ಟಿಸುವ ತನ್ನ ಪಕ್ಷದ ನಾಯಕರುಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ವಾರ್ನಿಂಗ್ ನೀಡಿದ್ದಾರೆ.
ಬಿಜೆಪಿ ನಾಯಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ‘ಮೈಕ್ ಕಂಡ ತಕ್ಷಣ ಅತ್ಯುತ್ಸಾಹದಿಂದ ಸಮಸ್ಯೆಗಳ ವಿಶ್ಲೇಷಣೆ ಮಾಡುವ ಸಾಮಾಜಿಕ ಪಂಡಿತರಂತೆ ವರ್ತಿಸಿ ತಪ್ಪು ಮಾಡುತ್ತೇವೆ, ಮಾಧ್ಯಮಗಳನ್ನು ಕಂಡ ತಕ್ಷಣ ಮಾತನಾಡಲು ಆರಂಭಿಸುತ್ತೇವೆ. ಮಾಧ್ಯಮಗಳಿಗೆ ಮಸಾಲೆ ಒದಗಿಸುತ್ತೇವೆ. ಅರೆಬೆಂದ ವಸ್ತುವನ್ನು ಅವರು ಅಲ್ಲಿಂದಲೇ ಎತ್ತಿಕೊಳ್ಳುತ್ತಾರೆ, ಈ ಬಗ್ಗೆ ಜಾಗರೂಕರಾಗಿ’ ಎಂದು ಮೋದಿ ಕಿವಿಮಾತು ಹೇಳಿದ್ದಾರೆ.
ಈ ಹಿಂದೆಯೂ ಮೋದಿ ತಮ್ಮ ಪಕ್ಷದವರಿಗೆ ಇಂತಹ ಸೂಚನೆಗಳನ್ನು ನೀಡಿದ್ದರು. ಆದರೂ ಕೆಲವರು ಮಾಧ್ಯಮದವರ ಮುಂದೆ ಬೇಜವಾಬ್ದಾರಿಯುತ ಹೇಳಿಕೆ ನೀಡಿ ವಿವಾದ ಸೃಷ್ಟಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.