ನವದೆಹಲಿ: ಈ ಬೇಸಿಗೆಯಲ್ಲಿ 100 ವಿದ್ಯಾರ್ಥಿಗಳಿಗೆ ಪೇಯ್ಡ್ ಇಂಟರ್ನ್ಶಿಪ್ಗಾಗಿ ಲೋಕಸಭಾ ಕಾರ್ಯಾಲಯವು ಅರ್ಜಿ ಆಹ್ವಾನ ಮಾಡಿದೆ. ಸ್ಪೀಕರ್ ರಿಸರ್ಚ್ ಕಾರ್ಯಕ್ರಮದಡಿ ಲೋಕಸಭಾ ಇಂಟರ್ನ್ಶಿಪ್ ಪ್ರೋಗ್ರಾಂನ್ನು ಆಯೋಜಿಸಲಾಗುತ್ತಿದೆ.
ಲೋಕಸಭಾ ಕಾರ್ಯದರ್ಶಿಗಳು ತಾವೇ ಸ್ವತ: ಇಂಟರ್ನ್ಶಿಪ್ಗಾಗಿ ವಿದ್ಯಾರ್ಥಿಗಳನ್ನು ಆಯ್ಕೆಮಾಡಿಕೊಳ್ಳುತ್ತಾರೆ, ಆಯ್ಕೆಯ ಬಳಿಕ ವಿದ್ಯಾರ್ಥಿಗಳನ್ನು ಲೋಕಸಭೆಯ ವಿವಿಧ ವಿಭಾಗಗಳಲ್ಲಿ ಕಾರ್ಯಕ್ಕೆ ನಿಯೋಜನೆಗೊಳಿಸಲಾಗುತ್ತದೆ.
ಎರಡು ವಿಭಾಗದಲ್ಲಿ ಇಂಟರ್ನ್ಶಿಪ್ ನಡೆಸಲಾಗುತ್ತದೆ. ಮೊದಲನೇಯದರಲ್ಲಿ 50 ಸ್ಥಾನಗಳಿದ್ದು, 3 ತಿಂಗಳ ಇಂಟರ್ನ್ಶಿಪ್ ಆಗಿದೆ. ಎರಡನೇಯದ್ದು 1 ತಿಂಗಳ ಇಂಟರ್ನ್ಶಿಪ್ ಆಗಿದೆ.
ಇಂಟರ್ನ್ಶಿಪ್ಗೆ ಅರ್ಜಿ ಹಾಕಲು 2018ರ ಮೇ 4 ಕೊನೆಯ ದಿನಾಂಕವಾಗಿದೆ. 21-30 ವರ್ಷದೊಳಗಿನ ಭಾರತೀಯ ನಾಗರಿಕರು ಅರ್ಜಿ ಸಲ್ಲಿಸಬಹುದು. ಉತ್ತಮ ಶೈಕ್ಷಣಿಕ ಸಾಧನೆಯ ದಾಖಲೆಯನ್ನು ಹೊಂದಿರಬೇಕು. ಎರಡು ವರ್ಷಗಳ ಸ್ನಾತಕೋತ್ತರ ಪದವಿ ಪಡೆದಿರಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.