ನವದೆಹಲಿ: ಅಟಲ್ ಪಿಂಚಣಿ ಯೋಜನೆ(ಎಪಿವೈ)ಗಾಗಿ ಸರ್ಕಾರ 121 ಕೋಟಿ ರೂಪಾಯಿಗಳ ಸಹ-ಕೊಡುಗೆಯನ್ನು ಬಿಡುಗಡೆಮಾಡಿದೆ. 2018 ರ ಎಪ್ರಿಲ್ 12ರವರೆಗೆ ಈ ಯೋಜನೆಗೆ 97.60 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ.
ಈ ಯೋಜನೆಯನ್ವಯ 31/3/2016ರೊಳಗೆ ನೋಂದಣಿ ಮಾಡಿಕೊಂಡು ಅಕೌಂಟ್ನಿಂದ ರೂ.1 ಸಾವಿರಕ್ಕಿಂತ ಹೆಚ್ಚು ಪಾವತಿ ಮಾಡಿದವರಿಗೆ ಸರ್ಕಾರದಿಂದ ಪಾವತಿ ಮಾಡಿದ ಶೇ.50ರಷ್ಟು 5 ವರ್ಷದವರೆಗೆ ಸಹ ಕೊಡುಗೆಯಾಗಿ ಹಣ ಸಿಗಲಿದೆ. ಆದಾಯ ತೆರಿಗೆ ಪಾವತಿದಾರರಲ್ಲದ, ಇನ್ನಿತರ ಯಾವುದೇ ಸಾಮಾಜಿಕ ಸುರಕ್ಷತ ಯೋಜನೆಯಲ್ಲಿಲ್ಲದ ಗ್ರಾಹಕರಿಗೆ ಮಾತ್ರ ಇದು ಅನ್ವಯವಾಗುತ್ತದೆ.
ಭಾರತದ ಸರ್ಕಾರ 2016-17ನೇ ಸಾಲಿನ ಸಹ-ಕೊಡುಗೆ ಮೊತ್ತ ರೂ.121 ಕೋಟಿಯನ್ನು ಬಿಡುಗಡೆ ಮಾಡಿದ್ದು, 14 ಲಕ್ಷ ಜನರಿಗೆ ಇದರ ಪ್ರಯೋಜನ ಸಿಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.