ನವದೆಹಲಿ: ಚೀನಾದ ಕ್ಸಿಯೋಮಿ ಭಾರತದಲ್ಲಿ ಮೂರು ಸ್ಮಾರ್ಟ್ಫೋನ್ ತಯಾರಕ ಘಟಕವನ್ನು ಆರಂಭಿಸಲು ಬಯಸಿದೆ. ಒಂದು ವೇಳೆ ಇದು ಕಾರ್ಯರೂಪಕ್ಕೆ ಬಂದರೆ 50 ಸಾವಿರಕ್ಕೂ ಅಧಿಕ ಉದ್ಯೋಗಗಳು ಸೃಷ್ಟಿಯಾಗುವ ಭರವಸೆ ಇದೆ. ಅಲ್ಲದೇ ಕೇಂದ್ರದ ‘ಮೇಕ್ ಇನ್ ಇಂಡಿಯಾ’ ಯೋಜನೆಗೂ ಉತ್ತೇಜನ ಸಿಗಲಿದೆ.
ಪ್ರಧಾನಿ ನರೇಂದ್ರ ಮೋದಿ ಭಾರತವನ್ನು ಜಾಗತಿಕ ಉತ್ಪಾದನಾ ಹಬ್ನ್ನಾಗಿ ಪರಿವರ್ತಿಸಲು ಬಯಸುತ್ತಿದ್ದಾರೆ. ಇದರಿಂದ ಏಷ್ಯಾದ ೩ನೇ ಅತೀದೊಡ್ಡ ಆರ್ಥಿಕತೆಯಾಗಿರುವ ಭಾರತದಲ್ಲಿ ಉದ್ಯೋಗ ಸೃಷ್ಟಿಯ ವೇಗ ಹೆಚ್ಚಲಿದೆ ಎಂಬ ಆಶಯ ಅವರದ್ದು. ಕ್ಷಿಯೋಮಿಯ ನಡೆ ಅವರ ಮಹತ್ವಾಕಾಂಕ್ಷೆಗೆ ಪುಷ್ಠಿ ನೀಡಲಿದೆ.
ಈಗಾಗಲೇ ಕ್ಸಿಯೋಮಿ ಚೆನ್ನೈನಲ್ಲಿ ಸರ್ಫೇಸ್ ಮೌಂಟ್ ಟೆಕ್ನಾಲಜಿ(ಎಸ್ಎಂಟಿ) ಪ್ಲಾಂಟ್, ಫಾಕ್ಸ್ಕಾನ್ ಸಹಭಾಗಿತ್ವದಲ್ಲಿ ಆಂಧ್ರ, ತಮಿಳುನಾಡಿನಲ್ಲಿ 3 ಸ್ಮಾರ್ಟ್ಫೋನ್ ಪ್ಲಾಂಟ್ಗಳನ್ನು ಹೊಂದಿದೆ. 10 ಸಾವಿರ ಜನರಿಗೆ ಉದ್ಯೋಗ ನೀಡಿದ್ದು, ಇದರಲ್ಲಿ ಶೇ.95ರಷ್ಟು ಮಹಿಳೆಯರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.