ಬೆಂಗಳೂರು: 1999ರ ಕಾರ್ಗಿಲ್ ಯುದ್ಧದಲ್ಲಿ ಮಹತ್ವದ ಪಾತ್ರವಹಿಸಿ ಹೋರಾಡಿದ್ದ, ವೀರಚಕ್ರ ಪುರಸ್ಕೃತ ಕನ್ನಡಿಗ ಯೋಧ ಕೊಲೊನಿಯಲ್ ಎಂ.ಬಿ ರವೀಂದ್ರನಾಥ್ ಅವರು ಭಾನುವಾರ ದೈವಾಧೀನರಾಗಿದ್ದಾರೆ. ಆದರೆ ಕರ್ನಾಟಕ ಸರ್ಕಾರ ಅವರಿಗೆ ಸರ್ಕಾರಿ ಗೌರವ ಸಮರ್ಪಣೆ ಮಾಡದೆ ಅವಮಾನ ಮಾಡಿದೆ.
ಸರ್ಕಾರದ ಈ ನಡೆಯನ್ನು ಸಂಸದ ರಾಜೀವ್ ಚಂದ್ರಶೇಖರ್ ಅವರು ಬಲವಾಗಿ ಖಂಡಿಸಿದ್ದು, ಹಲವಾರು ಮಾಜಿ ಯೋಧರು ಕೂಡ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ ಪ್ರಹಾರ ನಡೆಸಿರುವ ರಾಜೀವ್ ಚಂದ್ರಶೇಖರ್, ‘ಗೌರಿ ಲಂಕೇಶ್ಗೆ ಸಕಲ ಸರ್ಕಾರಿ ಗೌರವ ನೀಡಿದ್ದ ನೀವು ಅಪ್ಪಟ ಕನ್ನಡಿಗ ಕಾರ್ಗಿಲ್ ಹೀರೋನ ಬಗ್ಗೆ ತುಸು ಕಾಳಜಿಯನ್ನೂ ತೋರಿಲ್ಲ’ ಎಂದಿದ್ದಾರೆ.
ಮೂಲಗಳ ಪ್ರಕಾರ ಇಂಡಿಯನ್ ಆರ್ಮಿ ಫೋರಂ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಿದ್ದರಾಮಯ್ಯ ಸರ್ಕಾರ ಪತ್ರ ಬರೆಯಲಿದೆ ಎನ್ನಲಾಗಿದೆ.
Dear @siddaramaiah n @RahulGandhi – #GauriLankesh gets a state funerl so why not #ColMBRavindranath – hero of #Tololing n #Kargil war ?
Is ur entire politics about this kind of shameless hypocrisy n politicking bereft of any shred of decency? 😡@BJP4Karnataka @FlagsOfHonour https://t.co/tx7hZXMEBs
— Rajeev Chandrasekhar (@rajeev_mp) April 10, 2018
ಮಾನ್ಯ @siddaramaiah & @RahulGandhi ಅವರೇ, ಗೌರಿ ಲಂಕೇಶ್ ರಿಗೆ ಸಕಲ ಸರ್ಕಾರಿ ಗೌರವದಿಂದಿಗೆ ಅಂತ್ಯಕ್ರಿಯೆ ನೆಡೆಸಿಕೊಟ್ಟ ನೀವು, ಕಾರ್ಗಿಲ್ ಯುದ್ಧದ ವೀರ ಯೋಧ, ಕನ್ನಡದ ಮಣ್ಣಿನ ಮಗ ಕರ್ನಲ್ ರವೀಂದ್ರನಾಥ್ ರವರಿಗೆ ಏಕೆ ಆ ಗೌರವ ನೀಡುತ್ತಿಲ್ಲ?
ನಿಮ್ಮ ರಾಜಕಾರಣ ನಾಚಿಕೆಗೇಡಿನ ಆಷಾಢಭೂತಿತನ ಅಲ್ಲವೇ?@BJP4Karnataka @FlagsOfHonour
— Rajeev Chandrasekhar (@rajeev_mp) April 10, 2018
ಮಾನ್ಯ @siddaramaiah avare – ನಿಮ್ಮ ಡೋಂಗಿ ಕನ್ನಡ ಪ್ರೇಮ ಕೇವಲ ಬೂಟಾಟಿಕೆ. ನಮ್ಮ ನಾಡು ಒಬ್ಬ ವೀರ ಯೋಧನನ್ನು ಕಳೆದುಕೊಂಡಿರುವಾಗ ನಿಮಗೆ ಸ್ವಲ್ಪವೂ ಕಾಳಜಿಯಿಲ್ಲ! ನೀವು ನಿಮ್ಮ @RahulGandhi ಸಮಾಜವನ್ನು ಒಡೆಯುವಲ್ಲಿ ನಿರತರಾಗಿದ್ದೀರಿ. ಕ್ಷುಲ್ಲಕ ರಾಜಕೀಯದಲ್ಲಿ ಕನಿಷ್ಠ ಸೌಜನ್ಯವನ್ನೂ ಮರೆತಿದ್ದೀರಿ😡@BJP4Karnataka
— Rajeev Chandrasekhar (@rajeev_mp) April 10, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.