ಬೆಳ್ತಂಗಡಿ: 42 ವರ್ಷದ ಚರಿತ್ರೆಯಲ್ಲಿ ಕ್ಯಾಂಪ್ಕೋ ಸಂಸ್ಥೆಯು ರೂ. 60 ಕೋಟಿ ಲಾಭವನ್ನು ಗಳಿಸಿ ದಾಖಲೆ ವ್ಯವಹಾರ ಮಾಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಹೇಳಿದರು.
ಅವರು ಬುಧವಾರ ಇಲ್ಲಿನ ಎಸಿಡಿಸಿಸಿ ಬ್ಯಾಂಕ್ನ ಸಭಾಭವನದಲ್ಲಿ ಕ್ಯಾಂಪ್ಕೋದ ಬೆಳ್ತಂಗಡಿ ಶಾಖೆಯ ಸದಸ್ಯ ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಸ್ಥೆಯು ಪ್ರಸ್ತುತ ಒಟ್ಟು ರೂ. 1500 ಕೋಟಿ ರೂ.ಗಳ ವ್ಯವಹಾರವನ್ನು ಮಾಡಿದ್ದು, ರೂ.1290 ಕೋಟಿ ಅಡಿಕೆ ವ್ಯವಹಾರದಿಂದ ಹಾಗೂ, ರೂ.247 ಕೋಟಿ ಇತರ ಕೃಷಿ ಉತ್ಪನ್ನಗಳಿಂದ ವ್ಯವಹಾರ ನಡೆಸಲಾಗಿದೆ. 37.71ಶೇ. ಷೇರುಗಳನ್ನು ಹೊಂದಿದ್ದು 500 ರೂ.ಗಳನ್ನು ನೀಡಿದ 93 ಸಾವಿರ ಸದಸ್ಯರಿದ್ದಾರೆ ಎಂದರು.
ರೈತ ಸಮುದಾಯಕ್ಕೆ ಆಧಾರ ಸ್ತಂಭವಾಗಿ ಉಳಿಯಲು ಕೃಷಿಕರ ಇತರ ಉತ್ಪನ್ನಗಳಿಗೂ ಆದ್ಯತೆ ನೀಡುವ ನಿಟ್ಟಿನಲ್ಲಿ ಸದಸ್ಯರ ಸಲಹೆಯಂತೆ ಕಾಳುಮೆಣಸು ವ್ಯಾಪಾರ ವಿಸ್ತರಿಸಲು ಮಹಾ ಸಭೆಯಲ್ಲಿ ಬೈಲಾ ತಿದ್ದುಪಡಿಗೆ ನಿರ್ಧರಿಸಲಾಗಿದೆ. ಕ್ಯಾಂಪ್ಕೋ 2014-15ರಲ್ಲಿ ರೂ.1243 ಕೋಟಿ ಮೌಲ್ಯದ 4,54,974 ಕ್ವಿಂ. ಅಡಿಕೆ ಖರೀದಿಸಿದೆ. ರೂ.63 ಕೋಟಿ ಮೌಲ್ಯದ 71,376 ಕ್ವಿಂ. ಕೊಕ್ಕೋ, 17.75 ಕೋಟಿ ರೂ. ಮೌಲ್ಯದ 14,631 ಕ್ವಿಂ. ರಬ್ಬರ್ ಖರೀದಿಸಿ 15,900 ಕ್ವಿಂ. ಮಾರಾಟ ಮಾಡಲಾಗಿದೆ ಎಂದರು.
ವೇದಿಕೆಯಲ್ಲಿ ನಿರ್ದೇಶಕರಾದ ಸಂಜೀವ ಮಠಂದೂರು, ಎಚ್.ಎಮ್.ಮಹಾಬಲ ಭಟ್, ಕಿಶೋರ್ ಕುಮಾರ್ ಕೊಡ್ಗಿ, ಶ್ರೀಹರಿ ಭಟ್ ಎಸ್.ವಿಶ್ವೇಶ್ವರ ಭಟ್ ಜಿ., ಡಿಜಿಎಂ ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು.
ಈ ಸಂದರ್ಭ ಕೃಷಿಕರೊಂದಿಗೆ ಸಂವಾದ ನಡೆಸಲಾಯಿತು. ಸಂವಾದದಲ್ಲಿ ಕೃಷಿಕರಾದ ರಮೇಶ್ ಭಟ್, ನೇಮಿರಾಜ ಶೆಟ್ಟಿ, ಉಂಡೆಮನೆ ನಾರಾಯಣ ಭಟ್, ಪ್ರಭಾಕರ ಬಂಗೇರ, ಸುದರ್ಶನ್ ರಾವ್ ಗಜಂತೋಡಿ, ಅರುಣ್ ರೆಬೆಲ್ಲೋ ಕನ್ಯಾಡಿ, ಎನ್.ಎಸ್.ಗೋಖಲೆ ಮುಂಡಾಜೆ, ಕೃಷ್ಣ ಭಟ್, ಹರೀಶ್ ರಾವ್ ಕನ್ಯಾಡಿ, ಮೋಹನದಾಸ ಉಜಿರೆ, ಕಿಶೋರ್ ಹೆಗ್ಡೆ ಕರಂಬಾರು, ಉದಯಾಕರ ಹೆಬ್ಬಾರ್ ಮತ್ತಿತರರು ಚರ್ಚೆ ನಡೆಸಿದರು. ಆಡಳಿತ ಮಂಡಳಿಯವರು ಸದಸ್ಯರ ಸಮಸ್ಯೆಗಳಿಗೆ ಸಮರ್ಪಕ ಉತ್ತರ ನೀಡಿದರು.
ಅಡಕೆ ಬೆಳೆಗಾರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಕಾಳುಮೆಣಸು ಖರೀದಿ, ಕಾಳು ಮೆಣಸಿನ ಉತ್ತಮ ಗಿಡಗಳು, ಮೊಳಕೆ ಬಂದ ಕೊಕ್ಕೊ ಬೀನ್ಸ್ಗಳ ಖರೀದಿ, ಧರ್ಮಸ್ಥಳದಲ್ಲಿ ಖರೀದಿ ಶಾಖೆಯನ್ನು ತೆರೆಯುವುದು, ಡಿವಿಡೆಂಟ್ ಫಂಡ್ ಬರದಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಸಂಸ್ಥೆಯ ಉಪಾಧ್ಯಕ್ಷ ಕೆ.ಸತೀಶ್ಚಂದ್ರ ಭಂಡಾರಿ ಪ್ರಸ್ತಾವಿಸಿದರು. ನಿರ್ದೇಶಕ ಸೀತಾರಾಮ ಜಿ.ಭಟ್ ಸ್ವಾಗತಿಸಿ, ಈಶ್ವರ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಬಂಧಕ ಗೋವಿಂದ ಭಟ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.