ಪುಣೆ: ಮಹಾರಾಷ್ಟ್ರ ಪುಣೆ ನಗರದಲ್ಲಿ ಚಹಾ ಮಾರಾಟ ಮಾಡುವ ನವನಾಥ್ ಯವ್ಲೆ ಎಂಬುವವರು ತಿಂಗಳಿಗೆ ರೂ.12 ಲಕ್ಷ ಸಂಪಾದಿಸಿ ಎಲ್ಲರು ನಿಬ್ಬೆರಗಾಗುವಂತೆ ಮಾಡುತ್ತಿದ್ದಾರೆ.
ಶೀಘ್ರದಲ್ಲೇ ಯವ್ಲೆ ಅವರು ತಮ್ಮ ‘ಯವ್ಲೆ ಟೀ ಹೌಸ್’ನ್ನು ಅಂತಾರಾಷ್ಟ್ರೀಯ ಬ್ರ್ಯಾಂಡ್ ಆಗಿ ಮಾಡುವ ಸಿದ್ಧತೆಯಲ್ಲಿದ್ದಾರೆ. ಈಗಾಗಲೇ ಪುಣೆಯಲ್ಲಿ ಇದರ ಮೂರು ಘಟಕಗಳು ತೆರೆದಿದ್ದು, ಭಾರೀ ಖ್ಯಾತಿ ಪಡೆದಿದೆ.
‘ಪಕೋಡ ವ್ಯವಹಾರದಂತೆ ಟೀ ವ್ಯವಹಾರವೂ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಬಲ್ಲದು. ಟೀ ವ್ಯಾಪಾರ ಬೆಳವಣಿಗೆ ಕಾಣುತ್ತಿದ್ದು, ಇದರಿಂದ ನನಗೆ ಸಾಕಷ್ಟು ಸಂತೋಷವಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
ಪಕೋಡ ಮಾರಾಟವೂ ಉದ್ಯೋಗ ಎಂದ ಪ್ರಧಾನಿಗಳ ವಿರುದ್ಧ ಟೀಕೆ ಮಾಡುತ್ತಿರುವವರು ನವನಾಥ್ನಂತವರಿಂದ ತಿಳಿದುಕೊಳ್ಳಬೇಕಾದುದು ಸಾಕಷ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.