ಮಹಾರಾಷ್ಟ್ರದ ಮರಾಠವಾಡ ತುಳಸಭಾಯ್ ರಂಮ್ಲು ಸಂಖ್ವಾಡ್ ಮಸನ್ ಜೋಗಿ ಸಮುದಾಯಕ್ಕೆ ಸೇರಿದ ಮೊತ್ತ ಮೊದಲ ಮಹಿಳಾ ರಸಪಂಚ್. ದಶಕಗಳಿಂದ ಜಾತಿ, ಪದ್ಧತಿ, ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಹೋರಾಡುತ್ತಾ ಬಂದಿರುವ ಈಕೆ ಈಗ ಅರ್ಜಪುರದ ಸರಪಂಚ್ ಆಗಿ ಸಮಾಜದ ಸೇವೆ ನಡೆಸುತ್ತಿದ್ದಾಳೆ.
ಈಕೆಯ ಗ್ರಾಮದಲ್ಲಿ ರೂ.2,320 ಮಂದಿ ಇದ್ದಾರೆ. ಸರಿ ತಪ್ಪುಗಳನ್ನು ಅವಲೋಕಿಸಿ ನ್ಯಾಯ ತೀರ್ಪು ನೀಡುವುದರಿಂದ ಹಿಡಿದು ಅಭಿವೃದ್ಧಿ ಕಾರ್ಯಗಳನ್ನು ಈಕೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾಳೆ.
ಮಸನ್ ಜೋಗಿ ಸಮುದಾಯ ಹೆಸರೇ ಸೂಚಿಸುವಂತೆ ಸ್ಮಶಾನ ಕಾಯುವವರು, ಹೆಣಗಳನ್ನು ಸುಡುವವರು, ಮಸಣದ ದೇವತೆಯನ್ನು ಆರಾಧಿಸುವವರು. ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಇವರ ಸಮುದಾಯವಿದೆ. ರೇಶನ್ ಕಾರ್ಡ್, ವಿದ್ಯುತ್, ನೀರು ಸೌಲಭ್ಯ ಹೀಗೆ ಎಲ್ಲದರಿಂದಲೂ ಇವರು ವಂಚಿತರು. ಹೆಚ್ಚಿನವರು ಭಿಕ್ಷೆ ಎತ್ತಿಯೇ ಜೀವನ ಮಾಡುತ್ತಾರೆ. ಇವರನ್ನು ಮನುಷ್ಯರಂತೆ ಕಾಣುವವರಿಗಿಂತ ನಿಕೃಷ್ಟವಾಗಿ ಕಾಣುವವರೇ ಹೆಚ್ಚು.
ಇಂತಹ ಪರಿಸ್ಥಿತಿಯಲ್ಲೂ ದಿಟ್ಟತನದಿಂದ ಹೋರಾಡಿ ಗೆದ್ದು ಸರಪಂಚ್ ಆದವಳು ತುಳಸಭಾಯ್. ಆಕೆಯ ಮನೆಗೆಯೇ ಕಳೆದ ವರ್ಷ ವಿದ್ಯುತ್, ನೀರು ಸಿಕ್ಕಿದೆ. ರೇಶನ್ ಕಾರ್ಡ್ ಸಿಕ್ಕಿದೆ. ಇದೀಗ ಆಕೆ ತನ್ನಂದತೆ ಇತರ ಕುಟುಂಬದವರಿಗೆ ಈ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಹೋರಾಟ ಮಾಡುತ್ತಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.