ಪುತ್ತೂರು : ಕ್ಯಾಂಪ್ಕೊ ಚಾಕಲೇಟ್ ಕಾರ್ಖಾನೆಯ ರಿಕ್ರಿಯೇಷನ್ ಸೆಂಟರಿನಲ್ಲಿ ರಿಕ್ರಿಯೇಷನ್ ಸೆಂಟರಿನ ವಾರ್ಷಿಕ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಅಂಕ ಪಡೆದ ಅಜಯ್ ಕೃಷ್ಣ ಎಂ, ಕುಮಾರಿ ಕೃಪಾ, ನಿಶ್ಚಿತ್ ರೈ. ಎಸ್, ವೈಶಾಲ್ ಕೆ.ಎಂ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಕುಮಾರಿ ಜಿಶಾ ಎಂ.ಪಿ, ಕುಮಾರಿ ಕೃಪಾಲಿ, ಕೂಮಾರಿ ಮೋಕ್ಷ, ನಿಶಾನ್ ಎಂ.ಎನ್ , ಇಂಜಿನಿಯರಿಂಗ್ ನಲ್ಲಿ ಉತ್ತಮ ಅಂಕ ಪಡೆದ ಬಾಸಿಲ್ ಜೋನ್ ಮತ್ತು ಶಿಕ್ಷಣೇತರ ಕ್ಷೇತ್ರದಲ್ಲಿ ಸಾಧನೆ ಗೈದ ಕು.ಸಂತೃಪ್ತಿ , ನಿಶ್ಚಯ್ ರೈ, ಪ್ರಣವ್ ಹೊಳ್ಳ, ಕುಮಾರಿ ಚೈತನ್ಯ ರಾಜೇಶ್ವರಿ, ಸೂರ್ಯ ಬಿ.ಆರ್, ಕುಮಾರಿ ಅನುಶ್ರೀ ಎಂ, ಅತೀಶ್ ಗೌಡ, ಹರ್ಷಲ್ ಪ್ರೀಮಾ ಡಿ.ಸೋಜ, ಕ್ರಿಶಲ್ ಪರ್ಲ್ ಡಿ.ಸೋಜ, ಪವನ್ ಎನ್ ಬಲ್ನಾಡ್, ಅಬ್ದುಲ್ ಖಾದರ್ ಹಾಗೂ ಹಿರಿಯ ನಿವೃತ್ತಿ ಹೊಂದಿದ ಸದಸ್ಯರಾದ ಕೃಷ್ಣಪ್ಪ ಗೌಡ ಮತ್ತು ನಾರಯಣ ಭಂಡಾರಿ ದಂಪತಿಗಳಿಗೆ ಸನ್ಮಾನಿಸಲಾಯಿತು.
ಕ್ರೀಡಾ ಕೂಟದಲ್ಲಿ ಗೆದ್ದವರಿಗೆ ಬಹುಮಾನವನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಕ್ಯಾಂಪ್ಕೊ ಅಧ್ಯಕ್ಷರಾದ ಶ್ರೀ ಎಸ್.ಆರ್ ಸತೀಶ್ಚಂದ್ರ ಅವರು ಮಾತನಾಡಿ ಕ್ಯಾಂಪ್ಕೊ ಉದ್ಯೋಗಿಗಳ ಮಕ್ಕಳು IPS/IAS ಮುಂತಾದ ಅತ್ಯುನ್ನತ ಹುದ್ದೆಗಳಿಗೆ ಆಯ್ಕೆಗೊಂಡು ವಾರಾಣಾಸಿ ಸುಬ್ರಾಯ ಭಟ್ಟರ ಕನಸು ನನಸಾಗಬೇಕು ಎಂದರು. ಮಹಾಪ್ರಬಂಧಕರಾದ ಸುರೇಶ್ ಭಂಡಾರಿಯವರು ಮಾತನಾಡಿ ಕ್ಯಾಂಪ್ಕೋ ಉದ್ಯೋಗಿಗಳ ಕುಟುಂಬದವರ ಸಹಕಾರದಿಂದ ಕಾರ್ಖಾನೆ ಅತೀ ಉನ್ನತ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ ಎಂದರು. ಕ್ಯಾಂಪ್ಕೊ ಉಪಾಧ್ಯಕ್ಷರಾದ ಶ್ರೀ ಶಂಕರ ನಾರಾಯಣ ಖಂಡಿಗೆಯವರು ಮಾತನಾಡಿ ಮಕ್ಕಳನ್ನು ಗುರುತಿಸುವ ಮತ್ತು ಭಾರತೀಯ ಪರಂಪರೆಯನ್ನು ಕಲಿಸುವ ಕೆಲಸ ನಿರಂತರವಾಗಿ ಸಾಗಬೇಕು ಎಂದರು.
ವೇದಿಕೆಯಲ್ಲಿ ನೆಸ್ಲೆ ಇಂಡಿಯಾ ಲಿಮಿಟೆಡ್ ನ ಕೋ ಮ್ಯಾನಿಫ್ಯಾಕ್ಚರಿಂಗ್ ಮೆನೇಜರ್ ಶ್ರೀ ಪ್ರದೀಪ್ ವಲ್ಸಳ, ಗ್ಲೋಬಲ್ ಕನ್ಸೂಮರ್ ಪ್ರೊಡಕ್ಟ್ ಪ್ರೈವಟ್ ಲಿಮಿಟೆಡ್ನ ಶ್ರೀ ಸಂದೀಪ್ ಪ್ರಸಾದ್, ಕೋಕೋ ಪೆಲಿಯ ಶ್ರೀ ವಿಷ್ಣು ಪ್ರಸಾದ್ ಸಬರಾಯ, ಯೂನಿಯನ್ ಅಧ್ಯಕ್ಷರಾದ ಶ್ರೀ ವಿಶ್ವನಾಥ ಶೆಟ್ಟಿ , ಪ್ಯಾಕ್ಟರಿ ಮುಖ್ಯಸ್ಥರಾದ ಶ್ರೀ ಪ್ರಾನ್ಸಿಸ್ ಡಿ’ಸೋಜ, ರಿಕ್ರಿಯೇಷನ್ ಸೆಂಟರಿನ ಅಧ್ಯಕ್ಷರಾದ ಶೇಖರ ಪೂಜಾರಿ ಮತ್ತು ಉಪಾಧ್ಯಕ್ಷರಾದ ಶ್ರೀಮತಿ ಪೂರ್ಣಿಮ ಡೋಂಗ್ರೆ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.