ಹಾ! ಈ ಮಾತನ್ನು ಕೇಳಿ ಬಹಳಷ್ಟು ಜನರಿಗೆ ಕೋಪ ಬಂದರೆ, ಖುಷಿ ಪಡುವ ಕೆಲವು ಮಂದಿ ಸಹಾ ಇದ್ದಾರೆ. ಹೌದು, ಯಾರು ಈ ದೇಶವನ್ನು ಅದರ ಧರ್ಮವನ್ನು ಪ್ರೀತಿಸುತ್ತಾರೋ ಗೌರವಿಸುತ್ತಾರೋ ಅವರಿಗೆ ಬೇಸರ ಹಾಗು ಕೋಪ ಬರುವುದು ಸಹಜ. ಅಷ್ಟಕ್ಕೂ ಸಂಘದ ಬಗ್ಗೆ ನಿಮಗೇನು ಗೊತ್ತು ಜಿಗ್ನೇಶ್ ಅವರೇ. ಸಂಘದ ಕಾರ್ಯ ವೈಖರಿ, ಶಿಸ್ತು, ಸೇವೆ ಎಂದಾದರೂ ನೋಡಿದ್ದೀರಾ ? ಯಾವತ್ತಾದರೂ ಶಾಖೆಗೆ ಹೋಗಿದ್ದೀರಾ ? ಅದರ ಗಂಧ ಗಾಳಿಯೂ ನಿಮಗೆ ತಿಳಿದಿರಲು ಸಾಧ್ಯವಿಲ್ಲ ಬಿಡಿ. ನಿಮಗಾಗಿ ಸಂಘದ ಒಂದಷ್ಟು ವಿಚಾರ ಇಲ್ಲಿ ಬರಿಯುತ್ತಿದ್ದೇನೆ ಸಮಯವಿದ್ದಾಗ ಓದಿ.
ಸಂಘ ಪ್ರಾರಂಭವಾಗಿದ್ದು ಇಂದು ನಿನ್ನೆಯಲ್ಲ, 27 ಸೆಪ್ಟೆಂಬರ್ನಲ್ಲಿ 1925 ರಲ್ಲಿ. ಅಂದಿನಿಂದ ಇಂದಿನವರೆಗೂ ಅನೇಕ ಸೇವಾ ಕೆಲಸಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿದೆ. ಪ್ರತಿ ನಿತ್ಯ ಶಾಖೆಗಳಲ್ಲಿ ಶ್ಲೋಕ, ದೇಶಭಕ್ತಿ ಗೀತೆ, ಕಬಡ್ದಿ, ಯೋಗದಂತಹ ಚಟುವಟಿಕೆಗಳ ಮೂಲಕ ದೇಹಕ್ಕೆ ಮತ್ತು ಮನಸ್ಸಿಗೆ ಶಕ್ತಿ ನೀಡುವ ಕೆಲಸವಾಗುತ್ತಿದ್ದರೆ, ಮಾನಸಿಕವಾಗಿ, ಬೌದ್ಧಿಕವಾಗಿ ಬೆಳೆಯಲು ಚಿಂತನ-ಮಂಥನಗಳು ನಡೆಯುತ್ತವೆ.
ಹಾಗೆಯೇ ಸೇವೆಯೆಂಬುದು ಪ್ರತಿ ಸ್ವಯಂಸೇವಕನ ಆದ್ಯ ಕರ್ತವ್ಯ. ಎಲ್ಲಿಯಾದರೂ ನೆರೆ, ಭೂಕಂಪ, ಪ್ರಕೃತಿ ವಿಕೋಪವಾದರೆ ಅಲ್ಲಿ ಕಾಣಿಸಿಕೊಳ್ಳುವವರು ನಮ್ಮ ದೇಶದ ಸೈನಿಕರು ಹಾಗು ಸಂಘದ ಸ್ವಯಂಸೇವಕರೇ. ಇಂದಿಗೂ ಆರ್.ಎಸ್.ಎಸ್. ಜಾತಿ-ಮತ-ಪಂಥ ಎಂದು ಲೆಕ್ಕಿಸದೇ ಭಾರತದ ಏಳ್ಗೆಗೆ ನಮ್ಮ ದೀನ ದಲಿತರ ಸೇವೆ ಮಾಡುತ್ತಿದೆ. ಅನೇಕ ಶಿಕ್ಷಣ ವಂಚಿತರಿಗೆ ಶಾಲೆ ತೆರೆಯುವುದರ ಮೂಲಕ ಶಿಕ್ಷಣ ನೀಡಿದೆ. ಅನೇಕ ದಲಿತರಿಗೆ ದೇವಸ್ಥಾನದಲ್ಲಿ ಪೂಜೆ ಮಾಡಲು ಸಂಸ್ಕೃತ ಅಧ್ಯಯನ ನಡೆಸಲು ವ್ಯವಸ್ಥೆ ಮಾಡಿದೆ. ಸಂಘದಲ್ಲಿ ಜಾತಿ ಮತ ಭೇದ ಭಾವವಿಲ್ಲದೇ ಎಲ್ಲರೂ ಒಂದೇ ತಾಯಿ ಭಾರತಾಂಬೆಯ ಮಕ್ಕಳು ಎಂಬ ವಿಶ್ವಾಸವಿದೆ.
ಹೌದು, ನಮ್ಮ ಧರ್ಮದ ರಕ್ಷಣೆಗಾಗಿ ನಾವು ಸಿದ್ಧರಿದ್ದು ಅಂತಹ ಕೆಲಸಗಳೂ ನಡೆಯುತ್ತಿದೆ. ಸಂಘದ ಪ್ರತಿಯೊಬ್ಬ ಸ್ವಯಂಸೇವಕನಿಗೂ ಈ ದೇಶ ತನ್ನ ಮನೆಯಿದ್ದಂತೆ. ತನ್ನ ಮನೆ ಹಾಗು ಮನೆಯ ಸದಸ್ಯರಿಗೆ ಎನಾದರೂ ಸಮಸ್ಯೆ ಎದುರಾದರೆ ಅದನ್ನು ಸರಿ ಮಾಡಲು ಮೊದಲು ತಮ್ಮ ಮನೆಯವರೇ ಹೋಗುವುದು. ಈ ನಿಟ್ಟಿನಲ್ಲಿ ಸಂಘ ಕೆಲಸ ಮಾಡುತ್ತಿದೆ. ಇದಲ್ಲದೆ ಸ್ವಚ್ಛ ಭಾರತದಂತಹ ಕೆಲಸವನ್ನು ಮಾಡುವ ಮೂಲಕ ದೇಶದ ಅನೇಕ ಕಡೆ ಕೊಳಚೆ ನಿರ್ಮೂಲನೆ ಮಾಡಿದೆ. ಸಂಘದ ಸ್ವಯಂಸೇವಕರು ದಲಿತ ಕೇರಿಗಳಿಗೆ ತೆರಳಿ ಆರೋಗ್ಯ ತಪಾಸಣೆಯ ಕೆಲಸ, ಉಚಿತವಾಗಿ ವಿದ್ಯಾಭ್ಯಾಸ ಹೇಳಿಕೊಡುವ ಕೆಲಸ ಮಾಡುತ್ತಿದೆ. ಸರ್ಕಾರವೂ ಮಾಡದ ಅನೇಕ ಸೇವಾ ಚಟುವಟಿಕೆಯನ್ನು ಸಂಘ ಮಾಡಿಕೊಂಡು ಬಂದಿದೆ. ಇದು ನಿಮಗೆ ತಿಳಿದಿಲ್ಲವೇ. ನಮ್ಮ ಭಾರತದ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ್ ಜೀ ಕೂಡ ಸಂಘದ ಸ್ವಯಂಸೇವಕರಾಗಿದ್ದರು ಎಂಬುದನ್ನು ಮರೆಯಬೇಡಿ.
ನೀವು ಹಾಗು ನಿಮ್ಮ so called ನಾಯಕರು, ಇಂತಹ ಕೆಲಸಗಳನ್ನು ಎಂದಾದರು ಮಾಡಿದ್ದೀರಾ? ಚುನಾವಣಾ ಸಮಯದಲ್ಲಿ ನಿಮಗೆ ದಲಿತರು ನೆನಪಿಗೆ ಬರುತ್ತಾರೆ. ಇನ್ನುಳಿದ ದಿನಗಳಲ್ಲಿ ಅವರನ್ನು ಕಡೆಗಣಿಸುತ್ತೀರ. ನೆನಪಿಡಿ ಈ ದೇಶವನ್ನು 55 ವರ್ಷಗಳಿಗಿಂತ ಹೆಚ್ಚು ಆಳಿದವರು ನಿಮ್ಮ ಕಾಂಗ್ರೇಸ್ ಸರ್ಕಾರವೇ. ಸಂಘ ದಲಿತರ ಉದ್ಧಾರ ಮಾಡಬೇಡಿ ಎಂದು ಎಂದಾದರು ಹೇಳಿದೆಯಾ? ನಿಮ್ಮ ಸರ್ಕಾರ ಇಷ್ಟು ವರ್ಷ ಯಾಕೆ ಅದನ್ನು ಮಾಡಲಿಲ್ಲ. ಉತ್ತರಿಸುವಿರಾ? ದೇಶದಾದ್ಯಂತ ಲಕ್ಷಾಂತರ ಜನ ಸಂಘದ ಸ್ವಯಂಸೇವಕರಾಗಿ ಹಗಲಿರುಳು ದೇಶದ ಏಳ್ಗೆ, ಅಭಿವೃದ್ಧಿಗಾಗಿ ಎಲೆ ಮರೆಯ ಕಾಯಿಯಂತೆ ದುಡಿಯುತ್ತಿದ್ದಾರೆ. ನಿಮ್ಮ ಹಾಗೆ ದೇಶವನ್ನು ಜಾತಿ ಧರ್ಮ ಮತ ಪಂಥ ಎಂದು ಹೇಳಿ ವಿಭಜಿಸುತ್ತಿಲ್ಲ.
ಹಾ! ಕೊನೆಯದಾಗಿ ಒಂದು ಪ್ರಶ್ನೆ. ನಮ್ಮ ಸ್ವಯಂಸೇವಕರು ಮಾಡಿದ ಒಂದು ಕೆಲಸವನ್ನಾದರು ನೀವು ಮಾಡಿದ್ದೀರಾ ಮೇವಾನಿ ಅವರೇ? ಸಂಘ ಮುಕ್ತ ಭಾರತ ಮಾಡಬೇಕು ಎನ್ನುತ್ತಿರುವ ನೀವು ಮತ್ತು ನಿಮ್ಮಂತಹ ಬುದ್ಧಿ(ಇಲ್ಲದ)ಜೀವಿಗಳಿಗೆ ಒಂದು ಮಾತು, ಇಂದು ಆರ್.ಎಸ್.ಎಸ್. ಮುಕ್ತ ಭಾರತ ಮಾಡುವ ಕನಸನ್ನೂ ಕಾಣಬೇಡಿ ಏಕೆಂದರೆ ಕೆಡಿಸಲು ನೀವು ನೂರು ಮಂದಿಯಾದರೆ ರಕ್ಷಿಸಲು ನಾವು ಲಕ್ಷ ಲಕ್ಷಮಂದಿಯಿದ್ದೇವೆ ನೆನಪಿಡಿ.
ಸಂಘೇ ಶಕ್ತಿ ಕಲಿಯುಗೇ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.