ಎಡಗೈ ಬಳಸುವವರು ಬರವಣಿಗೆ ಸೇರಿದಂತೆ ಎಲ್ಲಾ ಕಾರ್ಯಗಳಿಗೂ ಒಂದಿಷ್ಟು ಕಿರಿಕಿರಿ ಅನುಭವಿಸುತ್ತಾರೆ. ಬಲಗೈ ಬಳಕೆಯೇ ಪ್ರಧಾನವಾಗಿರುವುದರಿಂದ ಎಡಗೈ ಬಳಸುವವರು ಆಗಾಗ ಅಪಹಾಸ್ಯಕ್ಕೂ ಈಡಾಗಿದ್ದಾರೆ.
4 ವರ್ಷದ ಎಡಚ ಪುಟಾಣಿಯೊಬ್ಬಳು ಪೆನ್ಸಿಲ್ ಶಾರ್ಪ್ನರ್ ಬಳಸಲು ಕಷ್ಟ ಅನುಭವಿಸುತ್ತಿದ್ದನ್ನು ಕಂಡ ಆಕೆಯ ತಾಯಿ ಹಿಂದೂಸ್ಥಾನ್ ಪೆನ್ಸಿಲ್ ಕಂಪನಿಗೆ ಪತ್ರ ಬರೆದು, ಎಡಗೈ ಬಳಕೆದಾರರಿಗೆ ವಿಶೇಷ ಶಾರ್ಪ್ನರ್ ತಯಾರಿಸಲು ಸಾಧ್ಯವೇ ಎಂದು ಕೇಳಿಕೊಂಡಿದ್ದರು.
ಅನಿರೀಕ್ಷಿತ ಎಂಬಂತೆ ಸಂಸ್ಥೆ ಅವರಿಗೆ ಉತ್ತರವನ್ನು ಬರೆದು ಅದರೊಂದಿಗೆ ಎಡಗೈ ಬಳಕೆದಾರರಿಗೆಂದೇ ವಿಶೇಷವಾಗಿ ತಯಾರಿಸಿದ ಶಾರ್ಪ್ನರ್ನ್ನು ನೀಡಿದೆ. ಸದ್ಯಕ್ಕೆ ಈ ಶಾರ್ಪ್ನರ್ ಮಾರುಕಟ್ಟೆಯಲ್ಲಿ ಇಲ್ಲ.
ಇಂತಹ ಸಮಸ್ಯೆಯನ್ನು ನಮ್ಮ ಗಮನಕ್ಕೆ ತಂದಿರುವುದಕ್ಕೆ ನಿಮಗೆ ಧನ್ಯವಾದ, ಈ ಬಗ್ಗೆ ನಾವು ಚಿಂತನೆ ನಡೆಸುತ್ತೇವೆ ಎಂದು ಸಂಸ್ಥೆ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.