ನವದೆಹಲಿ: ಭಾರತ ಮತ್ತು ಪಾಕಿಸ್ಥಾನದ ನಡುವೆ ಮತ್ತೆ ಮಾತುಕತೆಗಳು ಆರಂಭವಾಗಬೇಕೆಂದಿದ್ದರೆ ಪಾಕಿಸ್ಥಾನ ಮೂರು ಷರತ್ತುಗಳನ್ನು ಪಾಲಿಸಬೇಕೆಂದು ಕೇಂದ್ರ ಹೇಳಿದೆ.
ಸರ್ಕಾರದ ಪಾಕಿಸ್ಥಾನ ನೀತಿಯಲ್ಲಿ ಯಾವುದೇ ಗೊಂದಲಗಳಿಲ್ಲ, ನಮ್ಮದು ತುಂಬಾನೇ ಸ್ಪಷ್ಟ ನೀತಿ. ಶಿಮ್ಲಾ ಮತ್ತು ಲಾಹೋರ್ನ ಒಪ್ಪಂದದ ಭಾಗವಾಗಿರುವ ಮೂರು ಷರತ್ತುಗಳನ್ನು ಪಾಕಿಸ್ಥಾನ ಪಾಲಿಸಿದರೆ ನಾವು ಖಂಡಿತವಾಗಿಯೂ ಅವರೊಂದಿಗೆ ಮಾತುಕತೆ ಸಿದ್ಧವಾಗುತ್ತೇವೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಮೊದಲನೇಯ ಷರತ್ತು, ಉಭಯ ದೇಶಗಳ ನಡುವೆ ಶಾಂತಿಯುತ ಮಾತುಕತೆ ನಡೆಯಬೇಕು, ಭಾರತ ಮತ್ತು ಪಾಕಿಸ್ಥಾನದ ನಡುವೆ ಮಾತ್ರ ಮಾತುಕತೆ ನಡೆಯಬೇಕು, ಇನ್ನೊಂದು ರಾಷ್ಟ್ರದ ಹಸ್ತಕ್ಷೇಪವಿರಬಾರದು.
ಎರಡನೇಯದು, ಭಯೋತ್ಪಾದನೆ ಮುಕ್ತ ವಾತಾವರಣದಲ್ಲಿ ಮಾತುಕತೆ ನಡೆಯಬೇಕು, ಹಿಂಸೆಗೆ ಆಸ್ಪದವಿರಬಾರದು.
ಮೂರನೇಯದು, ಮುಂಬಯಿ ದಾಳಿಕೋರ ಝಾಕೀಉರ್ ರೆಹಮಾನ್ ಲಖ್ವಿ ಸೇರಿದಂತೆ ಇತರ ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು.
ಈ ಮೂರು ಷರತ್ತುಗಳನ್ನು ಪಾಕ್ ನಡೆಸಿಕೊಟ್ಟರೆ ಆ ದೇಶದೊಂದಿಗೆ ಖಂಡಿತಾ ಮಾತುಕತೆ ನಡೆಸುತ್ತೇವೆ ಎಂದು ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.