ಅಹ್ಮದಾಬಾದ್: ಸಬರಮತಿ ನದಿಯಿಂದ ಧರೋಯ್ ಡ್ಯಾಂವರೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಸಿ-ಪ್ಲೇನ್ನಲ್ಲಿ ಪ್ರಯಾಣಿಸಿ ಇತಿಹಾಸ ನಿರ್ಮಿಸಿದ್ದಾರೆ.
ಭಾರತದ ಮೊತ್ತ ಮೊದಲ ಸೀ-ಪ್ಲೇನ್ ಇದಾಗಿದೆ. ಅಲ್ಲದೇ ಭಾರತದ ನದಿ ನೀರಿನಲ್ಲಿ ಸೀ-ಪ್ಲೇನ್ ಲ್ಯಾಂಡ್ ಆಗುತ್ತಿರುವುದು ಇದೇ ಮೊದಲು.
‘ನಾಳೆ ಇತಿಹಾಸದಲ್ಲೇ ಮೊದಲ ಬಾರಿಗೆ ಸಬರಮತಿ ನದಿಯಲ್ಲಿ ಸೀ-ಪ್ಲೇನ್ ಲ್ಯಾಂಡ್ ಆಗಲಿದೆ, ನಾನು ಸೀ-ಪ್ಲೇನ್ ಮೂಲಕ ಧರೋಯ್ ಡ್ಯಾಂಗೆ ಪ್ರಯಾಣಿಸಲಿದ್ದೇನೆ’ ಎಂದು ಮೋದಿ ನಿನ್ನೆ ಸಮಾವೇಶದಲ್ಲಿ ಘೋಷಣೆ ಮಾಡಿದ್ದರು.
ಅದರಂತೆ ಇಂದು ಅವರು ಸೀ-ಪ್ಲೇನ್ ಮೂಲಕ ಸಬರಮತಿಯಲ್ಲಿ ಪ್ರಯಾಣಿಸಿ ಇತಿಹಾಸ ಬರೆದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.