ಇಂದು ಹಿಂದೂ ಸಾಮ್ರಾಜ್ಯೋತ್ಸವ ದಿನ. ೧೫೯೬ರ ವಿಕೃಮಶಕೆ ಆನಂದನಾಮ ಸಂವತ್ಸರದ ಜೇಷ್ಠ ಶುದ್ಧ ತ್ರಯೋದಶಿಯ ಶುಭದಿನದಂದು ಛತ್ರಪತಿ ಮಹಾರಾಜರು ಪಟ್ಟಾಭಿಶಿಕ್ತರಾದರು. ಆನಂದಭವನದ ನಿರ್ಮಾಣವಾಯಿತು. ಹಿಂದೂಗಳಿಗಿದು ವಿಶೇಷ ದಿನ. ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ ದಿನವನ್ನು ಈ ರೀತಿಯಾಗಿ ಆಚರಿಸಲಾಗುತ್ತಿದೆ.
ಶಿವಾಜಿ ಮಹಾರಾಜರು ಚಿಕ್ಕಂದಿನಲ್ಲೇ ತನ್ನ ಧರ್ಮ, ರಾಷ್ಟ್ರೀಯತೆಯ ಬಗ್ಗೆ ಅಪಾರ ಗೌರವ-ಶ್ರದ್ಧೆ ಹೊಂದಿದ್ದು, ಕಿರಿಯ ವಯಸ್ಸಿನಲ್ಲೇ ಮಾತಾ ಭವಾನಿ ಮುಂದೆ ಭವಾನಿ ಖಡ್ಗ ಹಿಡಿದು ‘ಹಿಂದೂ ಧರ್ಮ ಪ್ರತಿಷ್ಠಾಯೇ ಸಿದ್ಧ ಖಡ್ಗ ಸ್ವಯಾವಧಂ’ ‘ ಎಂದು ಪ್ರತಿಜ್ಞೆ ಮಾಡಿದ್ದರು. ಮಾವಳಿ ಬಾಲಕರನ್ನು ಒಟ್ಟು ಸೇರಿಸಿ ಮರಾಠ ಮತ್ತು ಮೊಗಲ್ ಎಂಬ ತಂಡವನ್ನು ಕಟ್ಟಿ ಆಟವಾಡಿಸುತ್ತಾ ಮರಾಠರು ಆಟ ಆಡುವ ತಂಡ ಗೆಲ್ಲುವಂತೆ ಮೊಗಲರು ಆಡುವ ತಂಡ ಸೋಲುವಂತೆ ಹೇಳಿದ್ದ. ಇದರಿಂದ ಮೊಗಲರು ಇರುವುದೇ ಸೋಲುವುದಕ್ಕೆ ಎಂಬುದನ್ನು ಆ ಬಾಲಕರ ಮನಸ್ಸಿನಲ್ಲಿ ಗೆಲುವಿನ ಸ್ಫೂರ್ತಿ ಮತ್ತು ಅವರಲ್ಲಿ ಸ್ವಾಭಿಮಾನ ತುಂಬಿದ್ದರು. ಹಾಗೆಯೇ ಮುಂದುವರಿದು ಅವರಿಗೆ ಗೆರಿಲ್ಲಾ ಯುದ್ಧ ತಂತ್ರವನ್ನು ಕಲಿಸಿ ಹಿಂದವೀ ಸಾಮ್ರಾಜ್ಯವನ್ನು ಕಟ್ಟಿ ‘ಛತ್ರಪತಿ’ ಬಿರುದಾಂಕಿತರಾದರು.
ಹಿಂದೂ ಹಿಂದುತ್ವ ಎಂಬುದು ಈ ದೇಶದ ಆಸ್ಮಿತೆ ಎಂದು ಪ್ರಕಟಿಕರಿಸಿದ. ಇದೇ ಮುಂದುವರಿದು ಹಿಂದವೀ ಸಾಮ್ರಾಜ್ಯ ಕಲ್ಪನೆಯನ್ನು ಇತರ ಭಾಗಗಳಿಗೆ ವ್ಯಾಪಿಸುವಂತೆ ಮಾಡಿದ ಈ ಭಾವವು ಕರ್ನಾಟಕದಲ್ಲಿ ಶ್ರೀಕೃಷ್ಣ ದೇವಾರಾಯ ಹಿಂದವೀ ಸಾಮ್ರಾಜ್ಯವಾದ ‘ವಿಜಯನಗರ’ಸಾಮ್ರಾಜ್ಯವನ್ನು ಸ್ಥಾಪಿಸುವಂತೆ ಪ್ರೇರಣೆಯಾಯಿತು. ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತುರತ್ನಗಳು ಬೀದಿ ಬೀದಿಯಲ್ಲಿ ಮಾರಾಟ ಮಾಡುತ್ತಿದ್ದರು. ಇದೇ ಹಿಂದೂ ಸಾಮ್ರಾಜ್ಯದ ಪರಮ ವೈಭವವೇ ಎನ್ನಬಹುದು. ಭಾರತಕ್ಕೆ ಭೇಟಿಯಿತ್ತ ವಿದೇಶಿ ಯಾತ್ರಿಕರು ಶಿವಾಜಿಯ ಬಗ್ಗೆ ಉಲ್ಲೇಖಿಸಿದ್ದರು. ಅದು ಹಿಂದಿ ಭಾಷೆಯಲ್ಲಿ ತರ್ಜುಮೆಯಾದಾಗ ಕವಿ ಅದನ್ನು ಉಲ್ಲೇಖಿಸಿದ ಆ ವಾಕ್ಯ ಹೀಗಿತ್ತು ಕಾಶೀ ಕೀ ಕಳಾಜಾತಿ ಮಂದಿರ್ ಮಸ್ಜಿದ್ ಹೋತಿ ಅಗರ್ ಶಿವಾಜಿ ನಾ ಹೋತಾ ಸುನ್ನತ್ ಹೋತಿ ಸಬ್ ಕೀ ಇದು ಶಿವಾಜಿಯ ಸಾಮ್ರಾಜ್ಯ ಸ್ಥಾಪನೆಯ ಮೊದಲು ಹಿಂದೂಗಳ ಹೃದಯವಿದ್ರಾವಕ ಪರಿಸ್ಥಿತಿಯನ್ನು ವರ್ಣಿಸುತ್ತದೆ. ವಿಜಯನಗರ ಸಾಮ್ರಾಜ್ಯದ ಬಗ್ಗೆ ಪರಮ ವೈಭವ ಸ್ಥಿತಿಯ ಉಲ್ಲೇಖವೂ ಇದೆ. ಮುಂದೆ ಈ ಆಸ್ಮಿತೆ ಪ್ರಕಟವಾದದ್ದು ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಇದನ್ನು ಪ್ರಕಟಿಕರಿಸಿದ್ದು ವೀರ ಸಾವರ್ಕರ್ ಮತ್ತು ತಿಲಕರು. ತಿಲಕರು ಮೊದಲ ಬಾರಿಗೆ ಶಿವಾಜಿ ಮಹೋತ್ಸವ ಮತ್ತು ಗಣೇಶ ಉತ್ಸವವನ್ನು ಸಾರ್ವಜನಿಕವಾಗಿ ಆಚರಿಸಿದರು.
ಇದರಿಂದ ಸಾರ್ವಜನಿಕರಲ್ಲಿ ಹಿಂದೂ ಎಂಬ ಆಸ್ಮಿತೆ ಪ್ರಕಟವಾಯಿತು. ಇದೇ ಮುಂದುವರಿದ ಸಾವರ್ಕರ್ ಹಿಂದೂ ಹಿಂದೂ ರಾಷ್ಟ್ರ ಎಂಬ ಕಲ್ಪನೆಯನ್ನು ಜನರ ಮುಂದಿಟ್ಟರು. ಒಬ್ಬ ವ್ಯಕ್ತಿ ಹಿಂದುವಾಗಿಸೆನ್ನಬೇಕಾದರೆ ಆತ ಈ ದೇಶದ ಸಂಸ್ಕೃತಿಯನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಹಿಂದೂ ಎಂದು ಸಾವರ್ಕರ್ ಹೇಳಿದರು. ಹಿಂದುತ್ವ ಎಂಬುದು ಈ ದೇಶದ ಪವಿತ್ರ ಪೌರತ್ವ ಎಂಬ ಭಾವವನ್ನು ಪ್ರಕಟಿಸಿದರು. ಈ ಭಾವ ಹಿಂದೂ ರಾಷ್ಟ್ರ ಪರಿಕಲ್ಪನೆಗೆ ಮುಂದಣ ಹೆಜ್ಜೆಯನ್ನು ಇಟ್ಟಂತಾಯಿತು. ಈ ಭಾವವೇ ಸ್ವಾತಂತ್ರ ಸಂಗ್ರಾಮದಲ್ಲಿ ಸ್ವಾಭಿಮಾನಿ ಭಾರತೀಯರನ್ನು ಸ್ವಾತಂತ್ರ್ಯವನ್ನು ಪಡೆಯುವುದಕ್ಕೆ ಪ್ರೇರಣೆಯಾಯಿತು.
ಗುರೂಜಿ ನೇತೃತ್ವದಲ್ಲಿ ಇದಕ್ಕೆ ಇನ್ನು ಶಕ್ತಿ ತುಂಬಿತು. ಗುರೂಜಿಯವರು ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ವೀ ಆಂಡ್ ಅವರ್ ನೈಬರ್ಹುಡ್ ನೇಷನ್ ಮತ್ತು ದ ಬನ್ಚ್ ಒಫ್ ತೋಟ್ಸ್ ಎಂಬ ಪುಸ್ತಕದಲ್ಲಿ ಪ್ರಕಟಿಸಿದರು. ಇದರೊಂದಿಗೆ ರಾಜಕೀಯದಲ್ಲಿ ಹಿಂದುತ್ವದ ಅಗತ್ಯತೆ ಇದೆಯೆಂದು ಪಂಡಿತ್ ದೀನ್ದಯಾಳ್ ಉಪಾಧ್ಯಾಯರು ಪ್ರತಿಪಾದಿಸಿದರು. ಇದೆಲ್ಲದರ ಪರಿಣಾಮವಾಗಿ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಇಂದು ಹಿಂದುತ್ವವು ಆವರಿಸಿಕೊಂಡಿದೆ.
ಇಡೀ ರಾಷ್ಟ್ರದ ಜನತೆಗೆ ಹಿಂದೂ ರಾಷ್ಟ್ರದ ಒಲವಿದೆ ಎಂಬುದು ಆಗಾಗ ಪ್ರಕಟವಾಗುತ್ತಿದೆ. ಇಂದು ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಹಿಂದುತ್ವದ ಆಶ್ರಯ ಬೇಕೆನಿಸಿದೆ. ಇದರಿಂದಲೇ ಭಾರತ ಪುನರಪಿ ಜಗತ್ತಿಗೆ ವಿಶ್ವವಂದ್ಯವಾಗಿದೆ. ಆದುದರಿಂದಲೇ ಈ ಹಿಂದುತ್ವ ಪರಿಕಲ್ಪನೆಯನ್ನು ಕೊಟ್ಟ ಶಿವಾಜಿ ಮತ್ತವರ ಪಟ್ಟಾಭಿಷೇಕದ ದಿನವದ ಜೇಷ್ಠ ಶುದ್ಧ ತ್ರಯೋದಶಿಯ ಶುಭದಿನವಾದ ಇಂದು ಹಿಂದವೀ ಸಾಮ್ರಾಜ್ಯದ ದಿನವೆಂದು ಆಚರಿಸುವುದು ಅರ್ಥಗರ್ಭಿತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.