ಒರಿಸ್ಸಾ: ಒರಿಸ್ಸಾದ ಮಾಜಿ ಮುಖ್ಯಮಂತ್ರಿ ಮತ್ತು 9 ಬಾರಿ ಲೋಕಸಭಾ ಸಂಸದರಾಗಿರುವ ಗಿರಿಧರ್ ಗಮಾಂಗ್ ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಿಜೆಪಿ ಅವರು ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಒಂದು ಮತದ ಮೂಲಕ ಪತನಗೊಳ್ಳಲು ಗಮಾಂಗ್ ಅವರು ಪ್ರಮುಖ ಕಾರಣರಾಗಿದ್ದರು. ಆ ವೇಳೆ ಮುಖ್ಯಮಂತ್ರಿಯಾಗಿದ್ದರೂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಇವರು ವಾಜಪೇಯಿ ಸರ್ಕಾರದ ವಿರುದ್ಧ ಮತ ಚಲಾವಣೆ ಮಾಡಿದ್ದರು.
ಇಂದು ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ನಾಯಕತ್ವದ ವಿರುದ್ಧ ಹರಿಹಾಯ್ದರು. ಅಲ್ಲದೇ 1999ರಿಂದ ಎಲ್ಲರೂ ನನ್ನನ್ನು ವಾಜಪೇಯಿ ಸರ್ಕಾರವನ್ನು ಪತನಗೊಳಿಸಿದ ಅಪರಾಧಿ ಎಂದು ಟೀಕೆ ಮಾಡುತ್ತಲೇ ಇದ್ದಾರೆ, ಆದರೆ ಕಾಂಗ್ರೆಸ್ ನಾಯಕರು ನನ್ನ ಸಮರ್ಥನೆಗೆ ಒಂದೇ ಒಂದು ದಿನವೂ ಬಂದಿಲ್ಲ ಎಂದು ಆರೋಪಿಸಿದರು.
ನನ್ನ ನಿಷ್ಠೆ ಪಕ್ಷಕ್ಕೆ ಹೊರೆಯಾಗಿ ಪರಿಣಮಿಸಿದೆ ಎಂದು ನನಗೆ ಅನಿಸುತ್ತಿದೆ, 1999ರ ವಿಶ್ವಾಸ ಮತದ ವೇಳೆ ಪಕ್ಷದ ಅದೇಶವನ್ನು ನಾನು ಪಾಲನೆ ಮಾಡಿದ್ದೇ ಅಷ್ಟೇ. ಸರ್ಕಾರ ಪತನಕ್ಕೆ ನಾನು ಕಾರಣವಲ್ಲ ಎಂದಿದ್ದಾರೆ.
ಕಾಂಗ್ರೆಸ್ ಮುಖಂಡನಾಗಿರುವ ಅವರ ಪುತ್ರ ಸಿಸಿರ್ ಗಮಾಂಗ್ ಕೂಡ, ತಾನು ಹಾಗೂ ತಂದೆ ಬಿಜೆಪಿ ಸೇರಲಿದ್ದೇವೆ ಎಂಬ ಬಗ್ಗೆ ಸುಳಿವು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.