ನವದೆಹಲಿ: ಯೋಗ ಗುರು ಬಾಬಾ ರಾಮ್ದೇವ್ ಅವರ ಪತಂಜಲಿ ಆಯುರ್ವೇದ ಲಿಮಿಟೆಡ್ ಈಗಾಗಲೇ ಹತ್ತು ಹಲವು ವಸ್ತುಗಳನ್ನು ಮಾರುಕಟ್ಟೆಗೆ ಬಿಟ್ಟು ಯಶಸ್ವಿ ಬ್ರಾಂಡ್ ಆಗಿ ಹೊರಹೊಮ್ಮಿದೆ. ಇದೀಗ ಅದು ಸೋಲಾರ್ ಪವರ್ ಪರಿಕರಗಳ ಉತ್ಪಾದನೆ ಮಾಡಲು ನಿರ್ಧರಿಸಿದೆ.
‘ಸ್ವದೇಶಿ ಚಳುವಳಿಯ ಭಾಗವಾಗಿ ಸೋಲಾರ್ನತ್ತ ಮುಖ ಮಾಡಿದ್ದೇವೆ. ಸೋಲಾರ್ನಿಂದ ಭಾರತದ ಪ್ರತಿ ಮನೆಯನ್ನೂ ಬೆಳಗಿಸಬಹುದು, ಇದನ್ನು ಸಕಾರಾಗೊಳಿಸುವುದು ನಮ್ಮ ಆಶಯ’ ಎಂದು ಪತಂಜಲಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ.
ಗ್ರಾಹಕ ವಸ್ತುಗಳ ಉತ್ಪಾದನೆಯಲ್ಲಿ ಯಶಸ್ವಿಯಾಗಿರುವ ಪತಂಜಲಿ ಇದೀಗ ಸೋಲಾರ್ ಪರಿಕರಗಳ ಉತ್ಪಾದನೆಯ ಮೂಲಕ ಮೂಲಸೌಕರ್ಯ ವಲಯಕ್ಕೂ ಕಾಲಿಡುತ್ತಿದೆ.
2006ರಲ್ಲಿ ಸ್ಥಾಪಿಸಲ್ಪಟ್ಟ ಪತಂಜಲಿ ಆಯುರ್ವೇದ ಲಿಮಿಟೆಡ್ನ ಪ್ರಸ್ತುತ ವಹಿವಾಟು ರೂ.20 ಸಾವಿರ ಕೋಟಿಯಿಂದ-25 ಸಾವಿರ ಕೋಟಿಯವರೆಗೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.