ಮಗಳನ್ನು ರಸ್ಲಿಂಗ್ ಚಾಂಪಿಯನ್ ಮಾಡಬೇಕು ಎಂಬ ಅದಮ್ಯ ಕನಸಿಟ್ಟುಕೊಂಡಿರುವ ತಾಯಿಯೊಬ್ಬಳು ಅದಕ್ಕಾಗಿ ದಿನನಿತ್ಯ ಸೈಕಲ್ ರಿಕ್ಷಾ ಓಡಿಸುತ್ತಿದ್ದಾಳೆ. ಆದರೆ ಅದರಿಂದ ಬರುವ ಸಂಪಾದನೆ ಆಕೆ ಮತ್ತು ಆಕೆಯ ಮಗಳ ಜೀವನಕ್ಕೆಯೇ ಸಾಲುವುದಿಲ್ಲ.
55 ವರ್ಷದ ಮಮನಿ ದಾಸ್ ಅವರ ಏಕೈಕ ಕನಸು ತನ್ನ ಮಗಳನ್ನು ರಸ್ಲಿಂಗ್ ಚಾಂಪಿಯನ್ ಮಾಡುವುದು. ಆದರೆ ಅದಕ್ಕೆ ಬೇಕಾದ ತರಬೇತಿಯನ್ನು ನೀಡಲು ಆಕೆ ಪರದಾಡುತ್ತಿದ್ದಾಳೆ. ಇಳಿ ವಯಸ್ಸಲ್ಲೂ ಆಕೆ ಸೈಕಲ್ ರಿಕ್ಷಾ ಓಡಿಸುತ್ತಿದ್ದಾರೆ.
ವಿವಿಧ ಸಂಘ, ಸಂಸ್ಥೆಗಳ ಬಳಿ ಹೋಗಿ ಸಹಾಯ ಮಾಡುವಂತೆ ಅಂಗಲಾಚಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೀಗ ಅವರ ಬದುಕಲ್ಲಿ ಆಶಾವಾದ ಮೂಡಿದೆ. ಆಕೆಯ ಈ ಸವಾಲಿನ ಬದುಕಿನ ಬಗ್ಗೆ ಅಸ್ಸಾಂನ ಪ್ರಸಿದ್ಧ ಗಾಯಕ ಅಂಗರಾಗ್ ಪಪೊನ್ ಮಹಂತ ಅವರು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ್ ಸೋನಾವಾಲ್ ಅವರಿಗೆ ಟ್ವಿಟ್ ಮಾಡಿದ್ದಾರೆ.
ಇದೀಗ ಸೋನಾವಾಲ್ ಮಹಿಳೆಯೊಂದಿಗೆ ಮಾತುಕತೆ ನಡೆಸಿ ಆಕಗೆ ಉದ್ಯಮ ಆರಂಭಿಸಲು ಲೋನ್ ನೀಡುವ ಭರವಸೆ ನೀಡಿದ್ದಾರೆ. ಆಕೆಯ ಮಗಳ ತರಬೇತಿಗೂ ಸಹಾಯ ಮಾಡುವ ಭರವಸೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.