ಜಮ್ಮು: ಜಮ್ಮು ಕಾಶ್ಮೀರದ ವಾಸ್ತವ ಗಡಿ ರೇಖೆಯ ಸಮೀಪ ಭಾರತ ನವೆಂಬರ್ ತಿಂಗಳೊಳಗೆ 100 ಬಂಕರ್ಗಳನ್ನು ನಿರ್ಮಾಣ ಮಾಡಲಿದೆ. ಪಾಕಿಸ್ಥಾನದಿಂದ ಕದನವಿರಾಮ ಉಲ್ಲಂಘನೆಗಳು ಪದೇ ಪದೇ ನಡೆಯುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಗುಂಡಿನ ಚಕಮಕಿಗಳು ನಡೆದ ಸಂದರ್ಭ ನಾಗರಿಕರು ಸುರಕ್ಷಿತರಾಗಲು ಬಂಕರ್ಗಳನ್ನು ಸ್ಥಾಪನೆ ಮಾಡುವುದಕ್ಕೆ ನಾವು ಆದ್ಯತೆ ನೀಡುತ್ತೇವೆ ಎಂದು ಜಮ್ಮು ಕಾಶ್ಮೀರ ಸರ್ಕಾರ ಹೇಳಿದೆ.
ಕದನವಿರಾಮ ಉಲ್ಲಂಘನೆಗಳು ನಡೆದ ಸಂದರ್ಭದಲ್ಲಿ ಸ್ಥಳಿಯರು ಬೇರೆ ಪ್ರದೇಶಗಳಿಗೆ ವಲಸೆ ಹೋಗದೆ ಈ ಬಂಕರ್ಗಳಲ್ಲಿ ಸುರಕ್ಷಿತರಾಗಿ ಇರಬಹುದಾಗಿದೆ.
ನವೆಂಬರ್ 30 ರೊಳಗೆ 100 ಬಂಕರ್ಗಳನ್ನು ಸ್ಥಾಪನೆ ಮಾಡುವುದಾಗಿ ಸರ್ಕಾರ ಹೇಳಿದೆ. ಪ್ರತಿ ಬಂಕರ್ಗಳೂ ತಲಾ 1500 ಜನರು ವಾಸ ಮಾಡಬಹುದಾಗಿದೆ. ರಾತ್ರಿ ಸಂದರ್ಭದಲ್ಲೂ ಉಳಿದುಕೊಳ್ಳುವುದಕ್ಕೆ ಈ ಬಂಕರ್ಗಳು ಸುರಕ್ಷಿತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.